ನಾನು ಉದ್ದೇಶಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ- ಸಂಸದ ಪ್ರತಾಪ್ ಸಿಂಹ.

kannada t-shirts

ಮೈಸೂರು,ಅಕ್ಟೋಬರ್,12,2022(www.justkannada.in): ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಹೆಸರಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ. ನಾನು ಉದ್ದೇಶಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಹಾರಾಜರು ಮೈಸೂರಿಗೆ ಕೊಟ್ಟ ನೂರು ಕೊಡುಗೆಗಳನ್ನ ನಾನು ಹೇಳುತ್ತೇನೆ. ಟಿಪ್ಪು ಬೆಂಬಲಿಸುವವರು ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನ ಹೇಳಲಿ ಸಾಕು. ಟಿಪ್ಪುಗೆ ಮೈಸೂರಿಗೆ ಏನು ಸಂಬಂಧ. ಟಿಪ್ಪು ಏನ್ ಮೈಸೂರಿನವನಾ..?  ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಒಂದು ಟ್ರೈನ್ ಗೆ ಇಟ್ಟ ಹೆಸರನ್ನ ಬದಲಾಯಿಸಿದ ಉದಾಹರಣೆಗಳೇ ಇಲ್ಲ. ಆದ್ರೆ ಇದನ್ನ ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ. ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯುವ ಅಗತ್ಯ ಇಲ್ಲ. ಟಿಪ್ಪು ಹೆಸರನ್ನ ಜನರ ಮನಸ್ಸಿನಿಂದ ತೆಗೆಯಲು ಆಗಲ್ಲಾ ಎನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ. ನಾನು ಮೈಸೂರಿಗೆ 10 ಟ್ರೈನ್ ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನ ನಾನು ಮಾಡಿದ್ದೇನೆ ಎಂದರು.

ಟಿಪ್ಪು ಒಬ್ಬ ಕನ್ನಡ ವಿರೋಧಿ. ಟಿಪ್ಪು ಪರ್ಶಿಯನ್ ಭಾಷೆಯನ್ನ ಹೇರಿದ್ದಾನೆ. ದಿವಾನ್ ಪದ ಪರ್ಶಿಯನ್ ಪದ.  ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳು ಪರ್ಶಿಯನ್ ಭಾಷೆಗೆ ಸೇರಿದ್ದು. ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾನಿಲಯ ಕೂಡ ಮೈಸೂರು ಮಹಾರಾಜರ ಕಟ್ಟಿಸಿದ್ದು. ಸಿದ್ದರಾಮಯ್ಯ ಮಹಾರಾಜರ ಬಗ್ಗೆ ಉಢಾಫೆಯಿಂದ ಮಾತನಾಡುತ್ತಾರೆ‌ ಎಂದು ಪ್ರತಾಪ್ ಸಿಂಹ ಆರೋಪಿಸಿದರು.

ಮೈಸೂರು ದಸರಾ ಅದ್ವಾನವಾಯ್ತು ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕೆ‌ಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ,  ಮನೆಯಲ್ಲಿ ಒಂದು ಮದುವೆ ಮಾಡಿದ್ರೆ ಒಂದಷ್ಟು ತಪ್ಪುಗಳಾಗುತ್ತೆ. ಇದು ಲಕ್ಷಾಂತರ ಜನರು ಬಂದು ಹೋದ ಕಾರ್ಯಕ್ರಮ. ಒಂದೆರೆಡು ತಪ್ಪುಗಳು ಸಹಜ. ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

Key words: purposely -changed –Tippu- name-MP Pratap Simha

website developers in mysore