ಇಂದು ಪಂಜಾಬ್ ಕಿಂಗ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ಫೈಟ್

Promotion

ಬೆಂಗಳೂರು, ಏಪ್ರಿಲ್ 12, 2021 (www.justkannada.in):

ಐಪಿಎಲ್‌’ನಲ್ಲಿ ಇಂದು ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್‌ ವಿರುದ್ಧ ಗೆಲುವಿಗಾಗಿ ಹೋರಾಡಲಿದೆ.

ಅಂದಹಾಗೆ ಕೆ.ಎಲ್‌. ರಾಹುಲ್‌ ಪಡೆ ಈಗ ಹೆಸರು ಬದಲಾಯಿಸಿಕೊಂಡು ‘ಪಂಜಾಬ್‌ ಕಿಂಗ್ಸ್‌’ ಆಗಿದೆ. 14ನೇ ಆವೃತ್ತಿಯಲ್ಲಾದರೂ ಅದು ಐಪಿಎಲ್‌ ಕಿಂಗ್‌ ಆಗಲೆಂದು ಅಭಿಮಾನಿಗಳು ಕುತೂಹಲದಿಂದ ಕಾದಿದ್ದಾರೆ.

ರಾಜಸ್ಥಾನ್‌ ತಂಡದ ನೂತನ ನಾಯಕನಾಗಿರುವ ಸಂಜು ಸ್ಯಾಮ್ಸನ್‌ಗೆ ಈ ಬಾರಿಯ ಐಪಿಎಲ್‌ ದೊಡ್ಡ ಸವಾಲೊಡ್ಡಲಿದೆ.

ಪಂಜಾಬ್‌ ಬ್ಯಾಟಿಂಗ್‌ ಲೈನ್‌ಅಪ್‌ ಎಂದಿನಂತೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್‌. ರಾಹುಲ್‌, ಕ್ರಿಸ್‌ ಗೇಲ್‌, ಅಗರ್ವಾಲ್‌, ಪೂರಣ್‌ ಜತೆ ಟಿ20ಯ ನಂ.1 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌, ಆಲ್‌ರೌಂಡರ್‌ಗಳಾದ ಫ್ಯಾಬಿಯನ್‌ ಅಲನ್‌, ಮೊಸೆಸ್‌ ಹೆನ್ರಿಕ್ಸ್‌, ಯುವ ಆಟಗಾರ ಶಾರೂಖ್‌ ಖಾನ್‌ ಬಲವಿದೆ.