ಅಭಿಮಾನಿಗಳಿಗೆ ಕಿವಿಮಾತು ಹೇಳಿದ ನಟ ಶಿವಣ್ಣ.

Promotion

ಬೆಂಗಳೂರು,ನವೆಂಬರ್,1,2021(www.justkannada.in): ನಟ ಪುನೀತ್ ರಾಜ್ ಕುಮಾರ್​ ಸಾವಿನ ಸುದ್ದಿ ಕೇಳಿ ಸಾಕಷ್ಟು ಜನರು ಮೃತಪಟ್ಟ ಬಗ್ಗೆ ವರದಿ ಆಗಿದೆ. ಈಗ ಈ ಎಲ್ಲಾ ವಿಚಾರಗಳ ಬಗ್ಗೆ ಶಿವರಾಜ್​ ಕುಮಾರ್​ ಅವರು ಮಾತನಾಡಿದ್ದಾರೆ. ಜೀವ ದೇವರು ಕೊಟ್ಟ ಅಮೂಲ್ಯ ಕೊಡುಗೆ.  ಪುನೀತ್ ಮೇಲೆ ಇರುವ ಪ್ರೀತಿ ಅರ್ಥವಾಗುತ್ತದೆ. ಅಭಿಮಾನಿಗಳು ಯಾರೂ ಜೀವ ಕಳೆದುಕೊಳ್ಳಬೇಡಿ ಎಂದು ನಟ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ನಟ ಶಿವರಾಜ್ ಕುಮಾರ್, ಅಭಿಮಾನಿಗಳ ನೋವು ಅರ್ಥವಾಗುತ್ತದೆ.  ಈ ಪ್ರೀತಿ ಪಡೆಯಲು ಅಪ್ಪು ಪುಣ್ಯ ಮಾಡಿದ್ಧ. ನೋವನ್ನ ನುಂಗಿಕೊಂಡು ನಡೆಯುವುದೇ ನಿಜವಾದ ಜೀವನ. ಎಲ್ಲರೂ ತಮ್ಮ ತಮ್ಮ ಕೆಲಸ ಮುಂದುವರೆಸಬೇಕು. ಅಭಿಮಾನಿಗಳು ಯಾರೂ ದುಡುಕಬಾರದು ಎಂದು ಕಿವಿಮಾತು ಹೇಳಿದ್ದಾರೆ.

ನಾಳೆ ಹಾಲುತುಪ್ಪ ಬಿಡುವ ಕಾರ್ಯ ಇದೆ. ಈ ಕಾರ್ಯ ಮುಗಿದ ಬಳಿಕ ಸಮಾಧಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಅಲ್ಲಿವರೆಗೆ ಅಭಿಮಾನಿಗಳು ಸಹಕರಿಸಬೇಕು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

Key words: punith raj kumar-death- actor-shivaraj kumar- fans-appeal