ಇಂದು ‘ಪುನೀತ್ ನುಡಿನಮನ’ ಕಾರ್ಯಕ್ರಮ: ಬೆಂಗಳೂರಿನತ್ತ ಮೈಸೂರಿನ ಶಕ್ತಿಧಾಮದ ಮಕ್ಕಳು.

Promotion

ಮೈಸೂರು,ನವೆಂಬರ್,16,2021(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಸಲ್ಲಿಸಲು ಇಂದು ಚಿತ್ರರಂಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿನ ಶಕ್ತಿಧಾಮದ ಮಕ್ಕಳು ತೆರಳಿದ್ದಾರೆ.

ಶಕ್ತಿಧಾಮದ ಮಕ್ಕಳು ಮೈಸೂರಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಶಕ್ತಿಧಾಮ ಕಾರ್ಯನಿರ್ವಾಹಕಿ ಸುಮನಾ ನೇತೃತ್ವದಲ್ಲಿ  ಬಸ್ ಮೂಲಕ ಸುಮಾರು 150 ಮಕ್ಕಳು ಬೆಂಗಳೂರಿಗೆ  ತೆರಳಿದ್ದಾರೆ.

ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಶಕ್ತಿಧಾಮದ ಮಕ್ಕಳು ಪ್ರಾರ್ಥನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿನಿಮಾ ಸ್ಟಾರ್ ನಟರು,ರಾಜಕಾರಣಿಗಳು ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.

Key words: punith namana-shaktidama-children-bangalore