‘ಯುವರತ್ನ’ ಪವರ್ ಫುಲ್ ಸಾಂಗಿಗೆ ಪವರ್ ಸ್ಟಾರ್ ಅಪ್ಪು ದನಿ !

Promotion

ಬೆಂಗಳೂರು, ಡಿಸೆಂಬರ್ 05, 2020 (www.justkannada.in): ಯುವರತ್ನ ಸಿನಿಮಾದ ಪವರ್ ಫುಲ್ ಹಾಡಿಗೆ ಧ್ವನಿಯಾಗಿದ್ದಾರೆ ಪವರ್ ಸ್ಟಾರ್ ಅಪ್ಪು.

ಮೊನ್ನೆಯಷ್ಟೇ ಯುವರತ್ನ ಸಿನಿಮಾದ ‘ಪವರ್ ಆಫ್ ಯೂಥ್’ ಹಾಡು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಮತ್ತೊಂದು ಹಾಡಿನ ಧ್ವನಿ ಮುದ್ರಣವಾಗಿದೆ. ‘ಊರಿಗೊಬ್ಬ ರಾಜ’ ಎಂಬ ಮಾಸ್ ಹಾಡನ್ನು ಪುನೀತ್ ಹಾಡಿದ್ದಾರೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂಗೀತ ನಿರ್ದೇಶಕ ತಮನ್ ಎಸ್. ಪುನೀತ್ ಅದ್ಭುತವಾಗಿ ಹಾಡಿದ್ದಾರೆ ಎಂದಿದ್ದಾರೆ.