ಜೇಮ್ಸ್ ಆಗಲಿದ್ದಾರೆ ಪವರ್ ಸ್ಟಾರ್ ! ನವೆಂಬರ್’ನಿಂದ ಶೂಟಿಂಗ್ ಶುರು

Promotion

ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಇದೇ ಮೊದಲ ಬಾರಿಗೆ ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬದಂದು ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು, ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿರುವ ಈ ಸಿನಿಮಾ ನವೆಂಬರ್ ನಿಂದ ಶೂಟಿಂಗ್ ಆರಂಭವಾಗಲಿದೆ.

ನಿರ್ದೇಶಕ ಚೇತನ್ ಸದ್ಯ ಶ್ರೀಮುರುಳಿ ಅಭಿನಯದ ಭರಾಟೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೇಮ್ಸ್ ಸಿನಿಮಾ ಕಥೆ ಈಗಾಗಲೇ ಸಿದ್ದವಾಗಿದ್ದು, ಶೂಟಿಂಗ್ ಗಾಗಿ ಸಿನಿಮಾ ತಂಡ ತಯಾರಾಗುತ್ತಿದೆ.