‘ಸಲಾರ್’ ಮೆಚ್ಚಿ, ಕನ್ನಡ ನಾಡಿಗೆ ಪ್ರಭಾಸ್’ಗೆ ವೆಲ್’ಕಮ್ ಎಂದ ಅಪ್ಪು

Promotion

ಬೆಂಗಳೂರು, ಡಿಸೆಂಬರ್ 03, 2020 (www.justkannada.in): ಪ್ರಶಾಂತ್ ನೀಲ್ ಅವರ ಮುಂಬರುವ ಚಿತ್ರ ‘ಸಲಾರ್’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಟೈಟಲ್ ಮತ್ತು ಫಸ್ಟ್​​ ಲುಕ್ ರಿವೀಲ್​​ ಆಗಿದ್ದು, ಇದು ಪ್ಯಾನ್​​ ಇಂಡಿಯಾ ಚಿತ್ರ ಕೂಡ ಆಗಿದೆ.

‘ಸಲಾರ್’ ಚಿತ್ರದ ಫಸ್ಟ್ ಲುಕ್ ವೀಕ್ಷಿಸಿದ ನಂತರ ನಟ ಪುನೀತ್​​ ರಾಜ್​ಕುಮಾರ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನಮ್ಮ ಕನ್ನಡ ನಾಡಿಗೆ, ನಮ್ಮ ಮನೆಗೆ ಸುಸ್ವಾಗತ ಪ್ರಭಾಸ್​​”, ಎಂದು ನಟ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್​​​ ಗೆ ನಟ ಪ್ರಭಾಸ್​ “ಧನ್ಯವಾಗಳು” ಎಂದು ಉತ್ತರಿಸಿದ್ದಾರೆ. ಅಂದಹಾಗೆ ‘ಸಲಾರ್’ ಚಿತ್ರದ ಫಸ್ಟ್ ಲುಕ್ ನಲ್ಲಿ ‘ದಿ ಮೋಸ್ಟ್ ವೈಯೊಲೇಟೆಡ್ ಮ್ಯಾನ್” ಎಂದು ಟ್ಯಾಗ್ ಲೈನ್ ಇದೆ.