ಮೇಕೆದಾಟು ಯೋಜನೆಗೆ ತಮಿಳುನಾಡು ಬಳಿಕ ಪುದುಚೇರಿಯಿಂದ ಕ್ಯಾತೆ.

Promotion

ಬೆಂಗಳೂರು,ಜುಲೈ,15,2021(www.justkannada.in):  ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದ್ದು ಯೋಜನೆ ಜಾರಿಗೆ ತಡೆ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಇದೀಗ ತಮಿಳುನಾಡಿನ ನಂತರ ಪುದುಚೇರಿ ಸಹ ಕ್ಯಾತೆ ತೆಗೆದಿದೆ.jk

ಕರ್ನಾಟಕ ರಾಜ್ಯ ನಿರ್ಮಿಸಲು ಉದ್ದೇಶಿಸಿರುವ.ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಪುದುಚೇರಿ ಸಿಎಂ ಎನ್. ರಂಗಸಾಮಿ  ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮೇಕೆದಾಟು ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪುದುಚೇರಿ ಸಿಎಂ ಎನ್. ರಂಗಸಾಮಿ  ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Key words: Puducherry – after- Tamil Nadu -Mekedatu -project.