ಪಿಎಸ್ ಐ ಹಗರಣ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ- ಪ್ರಿಯಾಂಕ್ ಖರ್ಗೆ ಆರೋಪ.

Promotion

ಕಲ್ಬುರ್ಗಿ,ಮೇ,13,2022(www.justkannnada.in): ಪಿಎಸ್ ಐ ನೇಮಕಾತಿ ಅಕ್ರಮ ಹಗರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,  ಪಿಎಸ್ ಐ ಹಗರಣ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ  ರಾಜ್ಯದ ಬೇರೆಡೆ ನಡೆದ ಅಕ್ರಮದ ಬಗ್ಗೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ.   ಅಕ್ರಮದ ಕಿಂಗ್ ಪಿನ್ ಗಳು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ,  ಹೆಸರು ಬಹಿರಂಗವಾದ್ರೆ ಸರ್ಕಾರ ಪತನ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಸರಿಯಾಗಿ ತನಿಖೆ ನಡೆಯುತ್ತಿಲ್ಲ ಎಂದರು.

‘ಕಲಬುರಗಿ ಹೊರತುಪಡಿಸಿಯೂ ರಾಜ್ಯದ ಬಹುತೇಕ ಕಡೆ ಹಗರಣ ನಡೆದಿದೆ. ಬೇರೆ ಕಡೆ ಹಗರಣಗಳ ಕುರಿತು ತನಿಖೆ ನಡೆಸುವುದು ಯಾವಾಗ? ತನಿಖೆ ನಡೆದು ಅಕ್ರಮದಲ್ಲಿ ಭಾಗಿಯಾದವರ ಹೆಸರು ಬಹಿರಂಗಗೊಂಡರೆ ಸರ್ಕಾರ ಬಿದ್ದುಹೋಗುತ್ತಿದೆ ಎನ್ನುವ ಭಯದಿಂದ ತನಿಖೆಯನ್ನು ಕಲಬುರಗಿಗೆ ಸೀಮಿತಗೊಳಿಸುತ್ತಿರಬಹುದು ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ಸಿಡಿ ಅಥವಾ ಹಣ ಕೊಟ್ರೆ ಮಂತ್ರಿಯಾಗ್ತಾರೆ. ಈಗ ಯಾರ್ಯಾರ ಸಿಡಿ ರೆಡಿಯಾಗಿರುತ್ತೋ ಗೊತ್ತಿಲ್ಲ.  ಯತ್ನಾಳ್, ಕಟೀಲ್ ಕೇಳಿದ್ರೆ ಹೇಳಬಹುದು ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

Key words: PSI –scam- investigation-Priyank Kharge