ಪಿಎಸ್ ಐ ನೇಮಕಾತಿ ಅಕ್ರಮ ಹಗರಣ: ಮರು ಪರೀಕ್ಷೆ ನಡೆಸದಂತೆ ಸಿಎಂ ಬೊಮ್ಮಾಯಿಗೆ ಮನವಿ.

Promotion

ಬೆಂಗಳೂರು,ಜೂನ್,30,2022(www.justkannada.in):  ಪಿಎಸ್ ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಮರುಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಗಿದೆ.

ಪಿಎಸ್ ಐ ನೇಮಕಾತಿ ಮರುಪರೀಕ್ಷೆ ನಡೆಸದಂತೆ  ಸಾಹಿತಿ ಬಿ.ಟಿ ಲಲಿತಾನಾಯಕ್, ಹೋರಾಟಗಾರ ವೆಂಕಟಸ್ವಾಮಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.coronavirus-vaccine-tough-action-home-minister-basavaraja-bommai

ಮರುಪರೀಕ್ಷೆ ನಡೆಸುವುದರಿಂದ ಕಳಂಕ ರಹಿತ ಅಭ್ಯರ್ಥಿಗಳಿಗೆ  ಅನ್ಯಾಯ ಮಾಡಿದಂತಾಗುತ್ತದೆ.  ಹಾಗಾಗಿ ಮರುಪರೀಕ್ಷೆ ಬೇಡ ಎಂದು ಮನವಿ ಮಾಡಿದ್ದಾರೆ.

Key words: PSI-recruitment –illegal- scam-Appeal – CM Bommai