ಪಿಎಸ್ ಐ ನೇಮಕಾತಿ ಅಕ್ರಮ ನಡೆದಿಲ್ಲ ಅಂದಿದ್ರಿ: ಹಾಗಾದ್ರೆ ಸುಳ್ಳು ವರದಿ ನೀಡಿದ್ದು ಯಾರು..? ಗೃಹ ಸಚಿವ ಅರಗ ಜ್ಞಾನೇಂದ್ರಗೆ ಪ್ರಿಯಾಂಕ್ ಖರ್ಗೆ ತರಾಟೆ.

Promotion

ಕಲ್ಬುರ್ಗಿ,ಮೇ,14,2022(www.justkannada.in):  ರಾಜ್ಯದಲ್ಲಿ ನಡೆದ 545 ಪಿಎಸ್ ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತರಾಟೆ ತೆಗೆದುಕೊಂಡಿದ್ದಾರೆ.

ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಅಂದಿದ್ರಿ ಮಾರ್ಚ್ 10 ರಂದು ಸದನದಲ್ಲಿ ಹೇಳಿದ್ರಿ.  ಈಗ ಭ್ರಷ್ಟಾಚಾರವೇ ಹೊರಗೆ ಬರುತ್ತಿದೆ. ನಿಮಗೆ ಸುಳ್ಳು ವರದಿ ನೀಡಿದ್ದು ಯಾರು..?. ಆಗ ಅಧೀಕಾರಿಗಳು ನೀಡಿದ್ಧ ವರದಿಯಲ್ಲಿ ಏನಿದೆ…?  ಸುಳ್ಳು ವರದಿ ನೀಡಿದ್ಧ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ..? ಬಹಿರಂಗಪಡಿಸಿ ಎಂದು ಕಿಡಿಕಾರಿದರು.

ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನ ಸಿಐಡಿ ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

Key words: PSI -recruitment – illegal-Priyank Kharghe -Home Minister -Arag Gnanendra.