ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು ಮಂಜೂರು.

kannada t-shirts

ಬೆಂಗಳೂರು,ನವೆಂಬರ್,18,2022(www.justkannada.in):  545 ಪಿಎಸ್ ​ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪಿಎಸ್​ಐ ಹಗರಣದ ಎ1 ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ರಚನಾಗೆ ಜಾಮೀನು ನೀಡಲಾಗಿದೆ. ಪ್ರಕರಣಕ್ಕೆ  ಸಂಬಂಧಿಸಿದಂತೆ  ಆರೋಪಿ ರಚನಾಳನ್ನು ಸಿಐಡಿ  ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿತ್ತು. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ್ ಮೊದಲ ರ್ಯಾಂಕ್ ಪಡೆದಿದ್ದಳು. ತನ್ನ ವಿರುದ್ಧ ಎಫ್‌ಐಆರ್ ದಾಖಲಾಯ್ತೋ ಅಂದಿನಿಂದ ರಚನಾ ನಾಪತ್ತೆಯಾಗಿದ್ದಳು.

ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್​​ನ್ನು ಸಿಐಡಿ ಡಿವೈಎಸ್​ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ ಬಂಧಿಸಿತ್ತು. ಎಸ್.ಜಾಗೃತ್ PSI ಪರೀಕ್ಷೆಯಲ್ಲಿ 4ನೇ ರ್ಯಾಂಕ್​​ ಬಂದಿದ್ದನು. ಇನ್ನು ಆರೋಪಿಗಳ ಪರ ವಕೀಲ ಶ್ಯಾಮ್​ ಸುಂದರ್​ ಅವರು ವಾದ ಮಂಡಿಸಿದ್ದರು.

Key words: PSI-Recruitment -Illegal Case-accused -granted -bail.

website developers in mysore