ಸರ್ಕಾರದ ವಿರುದ್ದ ಆರೋಪ ಸಾಬೀತು ಪಡಿಸಲಿ-ಸಿದ್ಧರಾಮಯ್ಯಗೆ ಸಚಿವ ಶ್ರೀರಾಮುಲು ಸವಾಲು…

Promotion

ದಾವಣಗೆರೆ,ಜು,4,2020(www.justkannada.in):  ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಅವ್ಯವಹಾರ ಆರೋಪ ಸಂಬಂಧ ಸಿದ್ಧರಾಮಯ್ಯ ಸರ್ಕಾರದ ವಿರುದ್ಧದ ಆರೋಪವನ್ನ ಸಾಬೀತುಪಡಿಸಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಕೋವಿಡ್ ಸಂದರ್ಭದಲ್ಲಿ ವಿಪಕ್ಷದವರು ಏನು ಕೆಲಸ ಮಾಡಿದ್ದಾರೆ. ಕೇವಲ ಆರೋಪದಿಂದ ಪ್ರಯೋಜನವಿಲ್ಲ, ಕೋವಿಡ್ ಸಂದರ್ಭದ ನಯಾ ಪೈಸೆಯ ಖರ್ಚು ವೆಚ್ಚದ ಲೆಕ್ಕಾಚಾರ ನೀಡುತ್ತೇವೆ. ಯಾವುದೇ ತನಿಖೆಗೂ ಸಿದ್ಧ.  ಸಿದ್ಧರಾಮಯ್ಯ ಸುಮ್ಮನೆ  ಸುಮ್ಮನೆ ಆರೋಪ ಮಾಡುವುದು ಬೇಡ. ಅದನ್ನ ಸಾಬೀತುಪಡಿಸಲಿ ಎಂದು ತಿಳಿಸಿದರು.prove-allegations-against-government-minister-sriramulu

ಸಿದ್ದರಾಮಯ್ಯ ಅವರು ಕೇಳುವ ಪ್ರತಿಯೊಂದು ಆರೋಪಕ್ಕೆ ಉತ್ತರವಿದೆ. ದೇಶದಲ್ಲಿ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಭಾರತ ಕೊರೊನಾ ವಿಚಾರ ಉತ್ತಮ ಕೆಲಸ ಮಾಡಿದೆ  ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ರೆ ಯಾವುದೇ ತನಿಖೆ ಮಾಡಿಸಲಿ, ಖರ್ಚು ಮಾಡಿದ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಶ್ವೇತ ಪತ್ರ ಹೊರಡಿಸಲು ಸಿದ್ಧ ಎಂದು ಶ್ರೀರಾಮುಲು ಸವಾಲು ಹಾಕಿದರು.  ಕೊರೊನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಜೊತೆ ಕೈಜೋಡಿಸಲಿ ಎಂದು ಸಚಿವ ಶ್ರೀರಾಮುಲು ಮನವಿ ಮಾಡಿದರು.

Key words: prove –allegations- against – government-Minister -Sriramulu