ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಖಂಡಿಸಿ ವಿಪಕ್ಷಗಳಿಂದ ಪ್ರತಿಭಟನೆ: ಸಂಸತ್ ಕಲಾಪ ಮುಂದೂಡಿಕೆ.

Promotion

ನವದೆಹಲಿ,ಮಾರ್ಚ್,27,2023(www.justkannada.in) :  ಸಂಸದ ಸ್ಥಾನದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಅನರ್ಹಗೊಳಿಸಿದ್ದನ್ನ ಖಂಡಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು.

ಸಂಸತ್ ಉಭಯ ಸದನಗಳಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಪ್ಪುಬಟ್ಟೆ ಧರಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಈ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿದೆ. ಲೋಕಸಭೆಯನ್ನು ಸಂಜೆ 4 ಗಂಟೆಗೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಇನ್ನು ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಖಂಡಿಸಿ  ಸಂಸತ್ ಭವನದ ಹೊರಗಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ  ಮಲ್ಲಿಕಾರ್ಜುನ ಖರ್ಗೆ, ಇದು ಪ್ರಜಾಪ್ರಭುತ್ವದ ಕಗ್ಗೋಲೆ ಕೇಂದ್ರ ಸರ್ಕಾರದಿಂದ ಇಡಿ ಐಟಿ ದುರ್ಬಳಕೆಯಾಗುತ್ತಿದೆ.  ಅದಾನಿ ಆದಾಯ ದುಪ್ಪಟ್ಟಾಗಿದ್ದು ಹೇಗೆ..? ಅದಾನಿ ಮೋದಿ ಬಗ್ಗೆ ರಾಹುಲ್ ಪ್ರಶ್ನಿಸಿದ್ರು. ಹೀಗಾಗಿ ಅನರ್ಹಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: Protests – Opposition -condemning -Rahul Gandhi’s- disqualification – MP