ಮೈಸೂರಿನಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್…..

Promotion

ಮೈಸೂರು,ಜನವರಿ,25,2021(www.justkannada.in): ಕೃಷಿ ಕಾಯ್ದೆ ವಿರೋಧಿಸಿ ನಾಳೆ ಜನ ಗಣರಾಜ್ಯೋತ್ಸವ ಹಿನ್ನಲೆ ಮೈಸೂರಿನಿಂದ ಬೆಂಗಳೂರಿಗೆ ರೈತರಿಂದ ಟ್ರ್ಯಾಕ್ಟರ್ ರ್ಯಾಲಿ ನಡೆಯಲಿದ್ದು ಹೀಗಾಗಿ ರೈತರು ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಜಮಾವಣೆಯಾಗುತ್ತಿದ್ದಾರೆ.jk

ನಾಳೆ ನಡೆಯಲಿರುವ ಟ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುವ ಸಲುವಾಗಿ ರೈತರು ಮಹಾರಾಜ ಮೈದಾನಕ್ಕೆ ಆಗಮಿಸುತ್ತಿದ್ದು, ಆದರೆ ಮಹಾರಾಜ ಕಾಲೇಜು ಮೈದಾನಕ್ಕೆ ರೈತರಿಗೆ ಪ್ರವೇಶ ನೀಡದ ಹಿನ್ನಲೆ, ಮೈದಾನದ ಗೇಟ್ ಬಳಿ ರೈತರು ಪ್ರತಿಭಟನೆ ನಡೆಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ರೈತನ ಬಾಯಿಗೆ ನೀರು ಬಿಡುವ ಮೂಲಕ ಸರ್ಕಾರದ ವಿರುದ್ಧ  ಕಿಡಿಕಾರಿದರು. ಮಹಾರಾಜ ಕಾಲೇಜು ಮೈದಾನದ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ್ದು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗುತ್ತಿದ್ದಾರೆ. ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದು ರೈತರಿಗೆ ಎಐಟಿಯುಸಿ ಸೇರಿ ಹಲವರು ಸಾಥ್ ನೀಡಿದ್ದಾರೆ.

ಇನ್ನು ಮೈಸೂರು ಗ್ರಾಮಾಂತರ ಭಾಗದಿಂದ ರೈತ ಮಹಿಳೆಯರು ಸಹ ಟ್ರಾಕ್ಟರ್ ನಲ್ಲಿ ಆಗಮಿಸುತ್ತಿದ್ದು ಮಹಾರಾಜ ಕಾಲೇಜು ಮೈದಾನದ ಮುಂಭಾಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ರೈತರ  ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ .ಕೃಷರಾಜ ಬುಲೇ ವಾರ್ಡ್  ರಸ್ತೆಯ ಎರಡು ಬದಿಯನ್ನ ಸಂಪೂರ್ಣ ಬಂದ್ ಮಾಡಲಾಗಿದೆ.

ಎರಡು ಬದಿ ರಸ್ತೆ ತಡೆದು ರೈತರು ಪ್ರತಿಭಟನೆ ತೀವ್ರಗೊಳಿಸಿದ್ದು ಈ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಯನ್ನ ಬಂದ್ ಮಾಡಲಾಗಿದೆ.  ರಸ್ತೆ ಬಂದ್ ಹಿನ್ನಲೆ ವಾಹನಗಳನ್ನ ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ. ಹಾಗೆಯೇ ಪ್ರತಿಭಟನೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.protests-farmers-blocking-road-mysore

ಮೊಬೈಲ್ ಕಮಾಂಡೋ ವೆಹಿಕಲ್ ಮೂಲಕ ಬಂದೋಬಸ್ತ್ ಮಾಡಲಾಗಿದ್ದು ಇದೇ ವೇಳೆ  ರೈತರು ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ  ಘಟನೆ ನಡೆಯಿತು.

ಹುಣಸೂರು ಮೈಸೂರು ಚೆಕ್ ಪೋಸ್ಟ್ ನಲ್ಲಿ ಟ್ರ್ಯಾಕ್ಟರ್ ಗಳಿಗೆ ತಡೆ….

ನಾಳೆ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸುತ್ತಿದ್ಧ ಟ್ರ್ಯಾಕ್ಟರ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಮೈಸೂರು ನಗರದೊಳಗೆ ರೈತರ ಟ್ರ್ಯಾಕ್ಟರ್ ಗಳಿಗೆ ನಿರ್ಬಂಧ ಹೇರಲಾಗಿದ್ದು  ಹುಣಸೂರು ಮೈಸೂರು ಚೆಕ್ ಪೋಸ್ಟ್ ನಲ್ಲಿ ಟ್ರ್ಯಾಕ್ಟರ್ ಗಳನ್ನ ಪೊಲೀಸರು ತಡೆದಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಗಣರಾಜೋತ್ಸವ ಟ್ಯಾಕ್ಟರ್ ಪೇರೆಡ್ ಗೆ ಅನುಮತಿ ನಿರಾಕರಿಸಲಾಗಿದೆ.

ಈ ಮಧ್ಯೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲು ಮೈಸೂರಿನತ್ತ ಆಗಮಿಸುತ್ತಿದ್ದ ರೈತರ ಟ್ರ್ಯಾಕ್ಟರ್ ಗಳಿಗೆ ಹುಣಸೂರು ಇನ್ಸ್ಪೆಕ್ಟರ್ ಪೂವಯ್ಯ ನೇತೃತ್ವದಲ್ಲಿ ರೈತರ ಟ್ರ್ಯಾಕ್ಟರ್ ಗಳನ್ನ ಪೊಲೀಸರು ತಡೆದಿದ್ದಾರೆ. ಪೊಲೀಸರಿಂದ ತಡೆ ಹಿನ್ನೆಲೆ ರೈತರು ಮೈಸೂರು ಮತ್ತು ಹುಣಸೂರು ನಡುವಿನ ಚೆಕ್ ಪೋಸ್ಟಿನಿಂದ ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ.

Key words: Protests -farmers -blocking road – Mysore