ಮತಾಂತರ ನಿಷೇಧಿಸದಿದ್ರೆ ಉಗ್ರ ಹೋರಾಟ- ಪ್ರಮೋದ್ ಮುತಾಲಿಕ್ ಎಚ್ಚರಿಕೆ.

Promotion

ವಿಜಯಪುರ,ಡಿಸೆಂಬರ್,11,2021(www.justkannada.in): ಮತಾಂತರ ನಿಷೇಧಿಸದಿದ್ರೆ ಜನವರಿ 1ರಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವಿಜಯಪುರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲೇ ಬೇಕು.  ಮತಾಂತರ ನಿಷೇಧ ಕಾಯ್ದೆ ಜಾರಿ ಆಗದೆ ಇದ್ರೆ ಹೋರಾಟ ಮಾಡಲಾಗುತ್ತದೆ.  ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಜಾರಿಯಾಗಿದೆ. ಹೀಗಾಗಿ ರಾಜ್ಯದಲ್ಲೂ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿ.  ಮೀನಾಮೇಷ ಎಣಿಸದೆ ಕಾಯ್ದೆ ಜಾರಿ ಮಾಡಿ ಮತಾಂತರ ನಿಷೇಧಿಸದಿದ್ರೆ ಜ.1 ರಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್,  ಮೊಟ್ಟೆ ಬೇಕು ಎನ್ನುವವರಿಗೆ ಮೊಟ್ಟೆ ಕೊಡಿ. ಮೊಟ್ಟೆ ಬೇಡ ಎನ್ನುವವರಿಗೆ ಹಣ್ಣು ಕೊಡಿ. ಸರ್ಕಾರ ಆದಷ್ಟು ಬೇಗ ವಿವಾದ ಬಗೆಹರಿಸಬೇಕು. ಮೀನಾಮೇಷಾ ಎಣಸಿದ್ರೆ ವಿವಾದ ಉಲ್ಬಣವಾಗುತ್ತೆ  ಎಂದು ಸಲಹೆ ನೀಡಿದರು.

Key words: protest- prohibition – conversion-Pramod Muthalik -warns.