ಅವಾಚ್ಯ ಶಬ್ದ ಬಳಕೆ ಖಂಡಿಸಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಎನ್.ಎಸ್.ಯು.ಐ ವಿದ್ಯಾರ್ಥಿ ಕಾಂಗ್ರೆಸ್ ನಿಂದ ಪ್ರತಿಭಟನೆ.

Promotion

ಬೆಂಗಳೂರು,ಆಗಸ್ಟ್,11,2021(www.justkannada.in): ಗ್ರಾಮೀಣಭಿವೃದ್ದಿ ಸಚಿವ  ಕೆ.ಎಸ್.ಈಶ್ವರಪ್ಪ ಅವರು ಕಾಂಗ್ರೆಸ್ ಕೀಳುಮಟ್ಟದ ಪದ ಬಳಕೆ ಮಾಡಿರುವುದನ್ನ ಖಂಡಿಸಿ ರಾಜ್ಯ ಎನ್.ಎಸ್.ಯು.ಐ.ಸಂಘಟನೆ ರೇಸ್ ಕೋರ್ಸ್, ಕಾಂಗ್ರೆಸ್ ಭವನ ,ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಹಾಗೂ ಸಚಿವರ ಮನೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ರವರು ಮತ್ತು ಪದಾಧಿಕಾರಿಗಳಾದ ರಫೀಕ್, ಮಾರುತಿ ಸೂರಜ್ ,ಮಹಮದ್ ,ಎರಿಕ್ ಸ್ಪೀಫನ್ ,ನಿಯಾಜ್ ,ಪ್ರಜ್ವಲ್ ರವರು ವಿದ್ಯಾರ್ಥಿ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಸಚಿವ ಈಶ್ವರಪ್ಪ ಅವರ ಮನೆ ಮುತ್ತಿಗೆ ಹಾಕಲು ಹೋದ ವೇಳೆ ಪೂಲೀಸರು ಎನ್.ಎಸ್.ಯು.ಐ.ಕಾರ್ಯಕರ್ತರನ್ನ ಬಂಧಿಸಿದರು

ಪ್ರತಿಭಟನೆ ವೇಳೆ ಮಾತನಾಡಿದ  ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಭಾರತಮಾತೆ ,ಸಂಸ್ಕೃತಿ ,ದೇಶಭಕ್ತಿ ಎಂದು ಹೇಳುವ ಹಿರಿಯ ರಾಜಕಾರಣಿ ಸಚಿವ ಕೆ.ಎಸ್.ಈಶ್ವರಪ್ಪರವರು   ತಾವು ಆಡುವ ಮಾತುಗಳಿಂದ ಅವರದ್ದು ಯಾವ ಸಂಸ್ಕೃತಿ ಎಂದು ತಿಳಿಯುತ್ತದೆ.

ಅರೆ ಹುಚ್ಚನಂತೆ ಮಾತನಾಡುತ್ತಿರುವ ಸಚಿವ ಈಶ್ವರಪ್ಪರವರನ್ನ ನಿಮ್ಯಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು. .ಈ ಹಿಂದೆ ಹಲವಾರು ಕಾಂಗ್ರೆಸ್ ನಾಯಕರುಗಳ ಬಗ್ಗೆ ಕೀಳುಮಟ್ಟದ ಪದಗಳನ್ನು ಬಳಸಿದ್ದಾರೆ. ಅವರು ಸಚಿವ ಸ್ಥಾನಕ್ಕೆ ಶೋಭೆಯಲ್ಲ .ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಈಶ್ವರಪ್ಪರವರು ಮಾಡುತ್ತಿದ್ದಾರೆ .ಮುಖ್ಯಮಂತ್ರಿಗಳು ಕೊಡಲೇ ಸಚಿವ ಸಂಪುಟದಿಂದ ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು.

Key words: Protest – NSUI- Student –Congress- against -Minister -KS Eshwarappa