ಎನ್.ಟಿ.ಎಂ.ಎಸ್ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಮುಂದುವರಿದ ಪ್ರತಿಭಟನೆ: ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಭಾಗಿ.

Promotion

ಮೈಸೂರು,ಜುಲೈ,8,2021(www.justkannada.in): ಮೈಸೂರಿನಲ್ಲಿ ಎನ್.ಟಿ.ಎಂ.ಎಸ್ ಶಾಲೆ ಉಳಿಸುವ ಉದ್ಧೇಶದಿಂದಾಗಿ  ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಹೋರಾಟಕ್ಕೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಬೆಂಬಲ ನೀಡಿದ್ದಾರೆ.jk

ಎನ್.ಟಿ.ಎಂ.ಎಸ್ ಶಾಲೆ ಮುಂಭಾಗ ಪ್ರತಿಭಟನೆ ಶಾಲೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿಲಾಯಿತು. ಶಾಲೆಯ ಸಮಾಧಿ ಮೇಲೆ ಸ್ಮಾರಕ ನಿರ್ಮಾಣ ಬೇಡ‌. ವಿವೇಕಾನಂದರ ಆಶಯದಂತೆ ಶಾಲೆ ಉಳಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿ. ಕನ್ನಡ ಶಾಲೆ ಉಳಿಸುವಂತೆ ಸರ್ಕಾರಕ್ಕೆ  ಒತ್ತಾಯಿಸಿದರು. ಶಾಲೆಯೂ ಉಳಿಯಲಿ ಸ್ಮಾರಕವೂ ಆಗಲಿ ಎಂದು  ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ,  ಪುತ್ರ ಸುನೀಲ್ ಬೋಸ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಭಾಗಿಯಾಗಿದ್ದರು.

Key words: protest –mysore- NTMS school –save- Former minister -HC Mahadevappa -support