ಪಾಕ್ ಪರ ಘೋಷಣೆ ಕೂಗಿದ  ಅಮೂಲ್ಯ ಗಡಿಪಾರಿಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

Promotion

ಬೆಂಗಳೂರು, ಫೆಬ್ರವರಿ 22, 2020 (www.justkannada.in): ಪಾಕ್ ಪರ ಘೋಷಣೆ ಕೂಗಿದ  ಅಮೂಲ್ಯ ಗಡಿಪಾರಿಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗೌನ್ ಹೌಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು, ದೇಶದ್ರೋಹಿ ಹೇಳಿಕೆ ನೀಡಿದ ಅಮೂಲ್ಯ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಇಂತಹ ದೇಶ ದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ದೇಶದ್ರೋಹಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು. ಸರ್ಕಾರ ಕೂಡ ಇಂತ ದೇಶದ್ರೋಹಿ ಸಂಘಟನೆಗಳನ್ನು ಕೂಡಲೆ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇನಾಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಾಂತರಾಜೇ ಅರಸ್ ಇತರರು ಪಾಲ್ಗೊಂಡಿದ್ದರು.