ಮತ್ತೆ ಭುಗಿಲೆದ್ದ ಮೈಸೂರಿನ ಎನ್‌‌‌‌’ಟಿಎಂಎಸ್ ಸರಕಾರಿ ಶಾಲೆ ಉಳಿಸಿ ಹೋರಾಟ !

kannada t-shirts

ಮೈಸೂರು, ಅಕ್ಟೋಬರ್ 13, 2019 (www.justkannada.in): ನಗರದ ಎನ್‌‌‌‌.ಟಿ.ಎಮ್.ಎಸ್ ಸರ್ಕಾರಿ ಶಾಲೆ ಉಳಿವಿಗಾಗಿ ಮತ್ತೆ ಹೋರಾಟ ಶುರುವಾಗಿದೆ.

ಕೆಲ ಪ್ರಗತಿ ಪರ ಚಿಂತಕರು ನೆನ್ನೆಯಿಂದಲೇ ಹೋರಾಟ ಶುರು ಮಾಡಿದ್ದು, ಇಂದು ಬೆಳಿಗ್ಗೆಯಿಂದಲೂ ಮತ್ತೆ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ಶನಿವಾರ ರಾತ್ರಿಯೂ ಪ್ರತಿಭಟನಾ ಕಾರರು ಸ್ಥಳ ಬಿಟ್ಟು ಕದಲಲು ಒಪ್ಪಿರಲಿಲ್ಲ.

ಎನ್‌‌‌‌.ಟಿ.ಎಮ್.ಎಸ್ ಶಾಲೆಗೆ ಸ್ಥಳದಲ್ಲೇ ಬಿಡಾರ ಹೂಡಿ ಕಾವಲು ಕಾಯುತ್ತಿರುವ ಪ್ರತಿಭಟನಾಕಾರರು. ಕನ್ನಡ ಕ್ರಿಯಾಸಮಿತಿ ಪ್ರದಾನ ಕಾರ್ಯದರ್ಶಿ ಸ.ರಾ.ಸುದರ್ಶನ್, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ, ಡಿ.ಎಸ್.ಎಸ್ ಪಧಾಧಿಕಾರಿಗಳಾದ ಶಂಭುಲಿಂಗ ಸ್ವಾಮಿ, ಜಗದೀಶ್ ಕೆ‌‌.ಕೆ, ಚೋರನಹಳ್ಳಿ ಶಿವಣ್ಣ ಇತರರು ಪಾಲ್ಗೊಂಡಿದ್ದರು.

ನಿನ್ನೆ ನಡೆದ ಬೆಳವಣಿಗೆಗಳಲ್ಲಿ ಶಾಲೆ ಪರ ಹಾಗೂ ವಿರೋಧ ಮಾತಿನ ಚಕಮಕಿ ನಡೆದಿತ್ತು. ಶಾಲೆ ವಿರೋಧವಾಗಿ ಡಿ.ಮಾದೇಗೌಡ, ಗೋ.ಮಧುಸೂದನ್ ಮತ್ತಿತರು ಚಾಟಿ ಬೀಸಿದ್ದರು.

website developers in mysore