ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹಿಸಿ ಪ್ರತಿಭಟನೆ: ರೈತರು ಮತ್ತು  ಪೊಲೀಸರ ನಡುವೆ ತಳ್ಳಾಟದ ವೇಳೆ ಓರ್ವ ರೈತ ಅಸ್ವಸ್ಥ…

ಬೆಂಗಳೂರು,ಜೂ,4,2019(www.justkannada.in): ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿ ಮಾಡುವಂತೆ ಆಗ್ರಹಿಸಿ  ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಓರ್ವ ರೈತ ಅಸ್ವಸ್ಥನಾದ ಘಟನೆ ಇಂದು ನಡೆದಿದೆ.

 ಕಬ್ಬು ಬೆಳೆಗಾರರಿಗೆ 3 ಸಾವಿರ ಕೋಟಿ ರೂಪಾಯಿ ಹಣ ಬಾಕಿ ಇದೆ. ಕಾರ್ಖಾನೆ ಮಾಲೀಕರು 6 ತಿಂಗಳಾದರೂ ಬಾಕಿ ನೀಡಿಲ್ಲ. ಕಬ್ಬಿನ ಎಪ್‌ಆರ್‌ಪಿ ದರ ಏರಿಕೆ ಯಾಗಿರುವ ಹಿನ್ನಲೆಯಲ್ಲಿ ರೈತರಿಗೆ ತುಂಬಲಾರದ ನಷ್ಟವಾಗುತ್ತಿದೆ. 2018 -19 ನೇ ಸಾಲಿನ ಎಸ್‌ಎಪಿ ದರ ನಿಗದಿಗೊಳಿಸಿ ಕಬ್ಬಿನ ಉಪುತ್ಪನ್ನಗಳ ಲಾಭದಲ್ಲಿ ಹಂಚಿಕೆ ಮಾಡಿ ರೈತರಿಗೆ ಹೆಚ್ಚುವರಿ ಹಣ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ರೈತ ಮುಖಂಡರ ನೇತೃತ್ವದಲ್ಲಿ ರೈತರು  ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ರೈತರು ರೈಲ್ವೇ ನಿಲ್ದಾಣದಿಂದ ವಿಧಾನಸೌಧದ ವರೆಗೆ ಪಾದಾಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಆನಂದ್ ರಾವ್ ಸರ್ಕಲ್ ಬಳಿ ಪ್ರತಿಭಟನಾಕಾರರನ್ನ ತಡೆದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನೂಕಾಟ ನಡೆದಿದೆ. ತಳ್ಳಾಟದ ವೇಳೆ ನಂಜನಗೂಡು ಮೂಲದ ರೈತ ರವಿ ಎಂಬುವವರು ತಲೆಸುತ್ತುಬಿದ್ದಿ ಅಸ್ವಸ್ಥರಾದ ಘಟನೆ ನಡೆಯಿತು.

Key words: Protest demand for sugarcane pending money.A farmer is ill during a push between farmers and police.

#farmer #protest #bangalore #police