ಪೌರಕಾರ್ಮಿಕರ ಸೇವೆ ಖಾಯಂ ಮಾಡಲು ಆಗ್ರಹಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ.

Promotion

ಬೆಂಗಳೂರು.,ಸೆಪ್ಟಂಬರ್,21,2022(www.justkannada.in):  ಪೌರಕಾರ್ಮಿಕರ ಸೇವೆ ಖಾಯಂ ಮಾಡಲು ಆಗ್ರಹಿಸಿ ಇಂದು ಪೌರ ಕಾರ್ಮಿಕರು ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಆರ್.ಟಿ ನಗರದ ಸಿಎಂ ಬೊಮ್ಮಾಯಿ ನಿವಾಸದ ಬಳಿ ಜಮಾಯಿಸಿದ ಪೌರಕಾರ್ಮಿಕರು, 8 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಿಕೊಳ್ಳಲು ಅವಕಾಶವಿದೆ. ಸದ್ಯ ಒಂದು ಸಾವಿರ ಕಾರ್ಮಿಕರನ್ನ ಖಾಯಂ ಮಾಡಲಾಗಿದೆ.  ಉಳಿದ 7 ಸಾವಿರ ಪೌರ ಕಾರ್ಮಿಕರ ಸೇವೆಯನ್ನ ಖಾಯಮಾತಿ ಮಾಡಬೇಕು ಎಂದು ಆಗ್ರಹಿಸಿದರು.

Key words: Protest -CM’s -house -demanding –permanent- service – civil servants.