ಮೈಸೂರಿನ ಐದು ಅಧಿಕಾರಿಗಳಿಗೆ ಮುಂಬಡ್ತಿ: ಸರ್ಕಾರದಿಂದ ಆದೇಶ..

Promotion

ಮೈಸೂರು, ಡಿಸೆಂಬರ್,1,2022(www.justkannada.in): ರಾಜ್ಯದ ವಿವಿದ ಹುದ್ದೆಯಲ್ಲಿರುವ 71 ಅಧಿಕಾರಿಗಳಿಗೆ ಸರ್ಕಾರ ಮುಂಬಡ್ತಿ ನೀಡಿದೆ. ಈ ಪೈಕಿ ಮೈಸೂರಿನ ಐದು ಅಧಿಕಾರಿಗಳಿಗೆ ಪ್ರಮೋಷನ್ ಆದೇಶ ಸರ್ಕಾರ ಪ್ರಕಟಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ನಿಶ್ಚಯ್  ಅವರನ್ನ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು ರಿಜಿಸ್ಟ್ರಾರ್ ಆಗಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ತಹಸೀಲ್ದಾರ್ ಆಗಿರುವ ಕೆ.ಜಾನ್ಸನ್  ಅವರನ್ನ ಮಂಡ್ಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ.

ಹಾಗೆಯೇ ಸ್ಥಳ ನಿರೀಕ್ಷಣೆಯಲ್ಲಿದ್ದ ಜೆ.ಮಹೇಶ್  ಅವರನ್ನ ಮೈಸೂರು ಕಾಡಾ ಕಚೇರಿಯ ಸಹಾಯಕ ಆಡಳಿತಾಧಿಕಾರಿಯಾಗಿ, ಸ್ಥಳ ನಿರೀಕ್ಷಣೆಯಲ್ಲಿದ್ದ ರಕ್ಷಿತ್ ಕೆ.ಆರ್. ಅವರನ್ನ ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ತಹಸೀಲ್ದಾರ್ ಆರ್.ಮಂಜುನಾಥ್ ರನ್ನ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ.

Key words: Promotion – five officers – Mysore-Order – government