ಚೀನಾದಲ್ಲಿ ‘ ಔಷಧ ಅನ್ವೇಷಣಾ ಕಂಪನಿ ‘ ಆರಂಭಿಸಲು ಮೈಸೂರಿನ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪಗೆ ಆಹ್ವಾನ.

 

ಮೈಸೂರು, ಮೇ 02, 2020 : (www.justkannada.in news ) : ಚೀನಾದಲ್ಲಿ ಔಷಧಿ ಸಂಶೋದನಾ ಸಂಸ್ಥೆ ಸ್ಥಾಪಿಸಲು ಮೈಸೂರಿನ ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಮತ್ತು ತಂಡಕ್ಕೆ ಆಹ್ವಾನ ನೀಡಿದ ಚೀನಾದ ಹೂಡಿಕೆದಾರರು.

ಪ್ರಾಧ್ಯಾಪಕ ಕೆ ಎಸ್ ರಂಗಪ್ಪ ಮತ್ತು ಅವರ ತಂಡದ ಜತೆಗೆ ಚೀನಾದ ಹೂಡಿಕೆದಾರರು ಶನಿವಾರ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಆ ದೇಶದ ನಿಂಗ್‌ ಬೊ ನಗರದಲ್ಲಿ ‘ ಔಷಧ ಅನ್ವೇಷಣೆ ಕಂಪನಿ ‘ ಸ್ಥಾಪಿಸಲು ಆಹ್ವಾನಿಸಿದರು.

ಕೋವಿಡ್ -19 ಲಾಕ್‌ಡೌನ್ ಕಾರಣ, ಈ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಸರಣಿ ವೀಡಿಯೊ ಸಂವಾದ ನಡೆದವು. ಹೂಡಿಕೆದಾರರ ಅಂತಿಮ ಸಭೆ ಇಂದು ( ಮೇ 2, 2020) ನಡೆಯಿತು. ಚೀನಾದಲ್ಲಿ “ಚೀನೀ ಭಾರತೀಯ ಔಷಧ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ” ವನ್ನು ಪ್ರಾರಂಭಿಸಲು ಈ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಯಿತು.

“ಚೀನೀ ಹೂಡಿಕೆದಾರರು ನಮ್ಮ ಅಣುಗಳನ್ನು ಆಂಟಿಕಾನ್ಸರ್ ಔಷದಿಗಳಾಗಿ ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿದ್ದಾರೆ” ಎಂದು ಪ್ರೊ. ರಂಗಪ್ಪ ತಿಳಿಸಿದ್ದು, ಚೀನಾದ ಹೂಡಿಕೆದಾರರು ನಿಂಗ್ ಬೊ ವಿಶ್ವವಿದ್ಯಾಲಯದ ಜೊತೆಗೆ ಔಷಧೀಯ ಕಂಪನಿಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ನನಗೆ ನೀಡಲು ಆಸಕ್ತಿ ಉತ್ಸುಕರಾಗಿದ್ದಾರೆ ಎಂದು ಪ್ರೊಫೆಸರ್ ಕೆ.ಎಸ್. ರಂಗಪ್ಪ ತಿಳಿಸಿದರು.

Professor K S Rangappa-invited by the Chinese investors-drug discovery company - NIngBo city- China.

key words : Professor K S Rangappa-invited by the Chinese investors-drug discovery company – NIngBo city- China.

 

ENGLISH SUMMARY :

Professor K S Rangappa and his team are invited by the Chinese investors to setup a drug discovery company at NIngBo city, China.
A series of video conferences were held from past one month in this regard due to Covid-19 lockdown. “Chinese investors are interested to develop our molecules as anticancer cancer drugs” Says Rangappa.
Chinese investors are also interested to give the responsibility of establishing a pharmaceutical company along with Ning Bo university to Rangappa. The final meeting of investors with Prof Rangappa and his team held on 2nd May 2020 through video conference to start the “Chinese Indian Drug Research and Development Center” in China