ನಟ ದರ್ಶನ್ ಸ್ನೇಹಿತರ ವಿರುದ್ಧ ಸ್ಪೋಟಕ ಆರೋಪ ಮಾಡಿದ ನಿರ್ಮಾಪಕ ಉಮಾಪತಿ.

Promotion

ಬೆಂಗಳೂರು,ಜುಲೈ,12,2021(www.justkannada.in): ನಟ  ದರ್ಶನ್​ ಸ್ನೇಹಿತರಿಂದಲೇ ನನಗೆ ಬೆದರಿಕೆ ಇದೆ. ಹರ್ಷ, ಶರ್ಮ, ರಾಕೇಶ್​ರಿಂದ ನನಗೆ ಬೆದರಿಕೆ ಇದೆ ಎಂದು ನಿರ್ಮಾಪಕ ಉಮಾಪತಿ ಗಂಭೀರ ಆರೋಪ ಮಾಡಿದ್ದಾರೆ.jk

ನಟ ದರ್ಶನ್ ಹೆಸರಿನಲ್ಲಿ ವಂಚನೆ ಯತ್ನ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಉಮಾಪತಿ, ದರ್ಶನ್​ ಸ್ನೇಹಿತರಿಂದಲೇ ನನಗೆ ಬೆದರಿಕೆ ಇದೆ. ಹರ್ಷ, ಶರ್ಮ, ರಾಕೇಶ್​ರಿಂದ ನನಗೆ ಬೆದರಿಕೆ ಇದೆ. ದರ್ಶನ್​ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಚರ್ಚೆ ಮೂಲಕ ಇದನ್ನ ಬಗೆಹರಿಸಿಕೊಳ್ಳಲ್ಲ. ಕಾನೂನು ಮೂಲಕವೇ ಇದಕ್ಕೆ ಪರಿಹಾರ ಹುಡುಕುತ್ತೇವೆ ಎಂದರು.

ನಾನು ದರ್ಶನ್​ ಸರ್​ಗೆ ಬೆಲೆ ಕೊಟ್ಟು  ಸ್ಪಷ್ಟನೆ ನೀಡುತ್ತಿದ್ದೇನೆ. ಪ್ರಕರಣದಲ್ಲಿ ಯಾರೂ ನನ್ನನ್ನ ಸಿಲುಕಿಸುತ್ತಿದ್ದಾರೆ. ನಾನು ಯಾರನ್ನೂ ಕಳೆದುಕೊಳ್ಳಲು ಇಷ್ಟಪಡಲ್ಲ. ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ. ಅದರಲ್ಲೇ ಜೀವನ ಮಾಡಿತ್ತೇನೆ. ಮೋಸ ಮಾಡುವ ಅಗತ್ಯವಿಲ್ಲ ಎಂದರು.

ನನ್ನ ಹಾಗೂ ದರ್ಶನ್​ ನಡುವೆ ಒಡನಾಟ ಚೆನ್ನಾಗಿಯೇ ಇದೆ. ನಾನು ದರ್ಶನ್​ರಿಗೆ ಅರುಣಾ ಕುಮಾರಿಯನ್ನ ಭೇಟಿ ಮಾಡಿಸಿಯೇ ಇಲ್ಲ. ಪ್ರಕರಣದಲ್ಲಿ ನನ್ನನ್ನ ಯಾರೋ ಬೇಕೆಂತಲೇ ಸಿಲುಕಿಸುತ್ತಿದ್ದಾರೆ. ಆರೋಪಿಗಳೆಲ್ಲ ಬೆಂಗಳೂರಿನಲ್ಲೇ ಇದ್ದಾರೆ. ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತದೆ.  ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಬಯಲಾಗಲಿದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದರು.

ನನಗೆ ಯಾರನ್ನೂ ಕಳೆದುಕೊಳ್ಳಲು ಇಷ್ಟವಿಲ್ಲ. ಈ ಪ್ರಕರಣದಲ್ಲಿ ಬೇರೆ ಏನೋ ನಡೆಯುತ್ತಿದೆ. ರೆಸಾರ್ಟ್​ನಲ್ಲಿ ಹರ್ಷ ಕೂಡ ನನ್ನ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ನನ್ನ ಹರ್ಷ ನಡುವೆಯೂ ಯಾವುದೇ ವೈಮನಸ್ಯ ಇಲ್ಲ. ನನ್ನ ಆಸ್ತಿ ಯಾರಿಗೂ ಕಡಿಮೆ ಇಲ್ಲ. ನನ್ನ ಬಳಿ ಎಕರೆಗಟ್ಟಲೇ ಆಸ್ತಿ ಇದೆ. ನನಗೆ ಈ ರೀತಿ ಇನ್ನೊಬ್ಬರ ಆಸ್ತಿ ಹೊಡೆಯೋ ಅವಶ್ಯಕತೆ ಇಲ್ಲ. ಇದು ನನ್ನ ಯೋಗ್ಯತೆ ಎಂದು ಉಮಾಪತಿ ಹೇಳಿದ್ದಾರೆ.

Key words: producer Umapati,-accused -actor –Darshan– friends