ಕೋವಿಡ್’ಗೆ ಮತ್ತೊಬ್ಬ ನಿರ್ಮಾಪಕ ಬಲಿ: ಗಿಮಿಕ್ ಚಿತ್ರದ ನಿರ್ಮಾಪಕ ಇನ್ನಿಲ್ಲ

Promotion

ಬೆಂಗಳೂರು, ಮೇ 13, 2021 (www.justkannada.in): ಗಣೇಶ್ ನಟಿಸಿದ್ದ ಗಿಮಿಕ್ ಚಿತ್ರದ ನಿರ್ಮಾಪಕ ದೀಪಕ್ ಸ್ವಾಮಿದೊರೈ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಆನಂದ್ ಆಡಿಯೋ ಸಂಸ್ಥೆ ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿದೆ. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ದೀಪಕ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಕೋಟಿ ರಾಮು ಎಂದೇ ಹೆಸರಾಗಿದ್ದ ಮಾಲಾಶ್ರೀ ಪತಿ ರಾಮು ಸೇರಿದಂತೆ ಮೂವರು ನಿರ್ಮಾಪಕರು ಕೋವಿಡ್ ಗೆ ಬಲಿಯಾಗಿದ್ದರು.

ಹಲವು ವರ್ಷಗಳಿಂದ ನಿರ್ಮಾಪಕ ಹಾಗೂ ವಿತಕರಾಗಿ ಗುರುತಿಸಿಕೊಂಡಿದ್ದ ದೀಪಕ್ ಸ್ವಾಮಿದೊರೈ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.