ರಜನಿ ‘ದರ್ಬಾರ್’ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ

Promotion

ಬೆಂಗಳೂರು, ಜನವರಿ 09, 2019 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಅವರ ದರ್ಬಾರ್ ಸಿನಿಮಾಗೆ ಮತ್ತೆ ವಿಘ್ನ ಎದುರಾಗಿದೆ.

ಕನ್ನಡದಲ್ಲಿ ಮಾತ್ರ ದರ್ಬಾರ್ ಚಿತ್ರ ಕರ್ನಾಟಕದಲ್ಲಿ ತೆರೆಕಾಣಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ದೇಶಾದ್ಯಂತ ಇಂದು ಏಕಕಾಲಕ್ಕೆ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ ದರ್ಬಾರ್ ತೆರೆ ಕಾಣುತ್ತಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

ಕರ್ನಾಟಕದ ಹಲವು ಚಿತ್ರ ಮಂದಿಗಳಲ್ಲಿ ದರ್ಬಾರ್ ನ ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳು ತೆರೆಕಾಣಲು ಸಜ್ಜಾಗಿದೆ. ಗುರುವಾರ ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ದರ್ಬಾರ್ ಸಿನಿಮಾವನ್ನ ಬಿಡುಗಡೆ ಮಾಡಿದ್ದು, ಥಿಯೇಟರ್ ಎದುರು ಕನ್ನಡ ಸಂಘಟನೆಗಳು ಧರಣಿ ನಡೆಸುತ್ತಿವೆ.