ಜುಲೈ 20ರಿಂದ 7ನೇ ಆವೃತ್ತಿ ಪ್ರೊ ಕಬ್ಬಡ್ಡಿ !

Promotion

ಮುಂಬೈ, ಮೇ 29, 2019 (www.justkannada.in): ಏಳನೇ ಆವೃತ್ತಿಯ ಟೂರ್ನಮೆಂಟ್ ಜುಲೈ 20ರಿಂದ ಆರಂಭವಾಗಲಿದೆ.

ಲೀಗ್ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಪ್ರೈ.ಲಿ ಈ ಕುರಿತು ಮಾಹಿತಿ ನೀಡಿದ್ದು,  ಪಂದ್ಯಗಳು ಇನ್ನು ಮುಂದೆ ರಾತ್ರಿ 7:30ಕ್ಕೆ ಆರಂಭವಾಗಲಿವೆ. ಈ ಹಿಂದೆ ಪಂದ್ಯಗಳು ರಾತ್ರಿ 8:00ಕ್ಕ ಆರಂಭವಾಗುತ್ತಿದ್ದವು.

ವೀಕ್ಷಕರು ಹಾಗೂ ಟಿವಿ ಪ್ರೇಕ್ಷಕರಿಗೆ ಅನುಕೂಲವಾಗುವಂತೆ 7ನೇ ಆವೃತ್ತಿಯ ಲೀಗ್‌ನ ಪ್ರತಿ ನಗರ ಹಂತದ ಪಂದ್ಯಗಳು ಶನಿವಾರ ಆರಂಭವಾಗಲಿದೆ ಹಾಗೂ ಪಂದ್ಯಗಳು ಟೂರ್ನಿಯುದ್ದಕ್ಕೂ ರಾತ್ರಿ 8ಕ್ಕೆ ಆರಂಭವಾಗಲಿದೆ ಎಂದು ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.