ಹೈದರಾಬಾದ್’ನಲ್ಲಿ ಇಂದು ಪ್ರೊ ಕಬ್ಬಡ್ಡಿ 7ನೇ ಆವೃತ್ತಿಗೆ ಸಂಭ್ರಮದ ಚಾಲನೆ

Promotion

ಹೈದರಾಬಾದ್‌, ಜುಲೈ 19, 2019 (www.justkannada.in): ಪ್ರೊ ಕಬಡ್ಡಿ 7ನೇ ಆವೃತ್ತಿಗೆ ಹೈದರಾಬಾದ್‌ನಲ್ಲಿ  ಇಂದು ಚಾಲನೆ ಸಿಗಲಿದೆ.

ನಾಳೆಯಿಂದ (ಶನಿವಾರ) ಪಂದ್ಯಗಳು ಅಧಿಕೃತವಾಗಿ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ ಎದುರಿಸಲಿದೆ.

ಅದೇ ದಿನ ನಡೆಯಲಿರುವ ಮತ್ತೂಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು ಸೆಣಸಾಟ ನಡೆಸಲಿವೆ.

ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ಸಾಗಲಿವೆ. ಭರ್ತಿ 3 ತಿಂಗಳ ಕಾಲ 12 ತಂಡಗಳು, 12 ನಗರಗಳಲ್ಲಿ ಕಾಲೆಳೆದಾಟದ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿವೆ.