ಪಶ್ಚ್ಯತಾಪದ ಸರದಿ..: ಅಂದು ಪ್ರಿಯಾಂಕ..ಇಂದು ರಚಿತಾರಾಮ್…

Promotion

 

ಬೆಂಗಳೂರು, ಜೂ.23, 2019 : (www.justkannada.in news) : ಹದಿನೈದು ವರ್ಷಗಳ ಹಿಂದೆ ನಟಿ ಪ್ರಿಯಾಂಕ ಎದುರಿಸಿದ್ದ HOT ಸನ್ನಿವೇಶವನ್ನು ಇದೀಗ ನಟಿ ರಚಿತಾ ರಾಮ್ ಎದುರಿಸುತ್ತಿರುವುದು ಸ್ಯಾಂಡಲ್ ವುಡ್ ವಿಚಿತ್ರಗಳಲ್ಲಿ ಒಂದು. ಈ ಎರಡು ಘಟನೆಗಳಲ್ಲೂ ಕಾಮನ್ ಫ್ಯಾಕ್ಟರ್ ಅಂದ್ರೆ ನಟ ` ಉಪೇಂದ್ರ ;.

2004 ರ ಫೆಬ್ರವರಿಯಲ್ಲಿ ತೆರೆಕಂಡ ನಟ ರವಿಚಂದ್ರನ್ ನಟಿಸಿ ನಿರ್ದೇಶಿಸಿದ್ದ ಸಿನಿಮಾ ` ಮಲ್ಲ ‘. ಈ ಸಿನಿಮಾ ಆಗ ವಿವಾದಕ್ಕೆ ಎಡೆಮಾಡಿತ್ತು. ಕಾರಣ, ಆಗ ನಟ ಉಪೇಂದ್ರ, ಬೆಂಗಾಲಿ ಮೂಲದ ಕನ್ನಡದ ನಟಿ ಪ್ರಿಯಾಂಕ ಅವರನ್ನು ಲವ್ ಮಾಡಿ ಮದುವೆಯಾಗಿದ್ದರು. ಇದಾದ ಕೆಲವೇ ಕೆಲ ಸಮಯದಲ್ಲಿ ಮಲ್ಲ ಸಿನಿಮಾ ತೆರೆಗಪ್ಪಳಿಸಿತು. ಈ ಸಿನಿಮಾದಲ್ಲಿನ ಹಾಡಿನ ಸನ್ನಿವೇಶದಲ್ಲಿ ನಟಿ ಪ್ರಿಯಾಂಕ ಅಭಿನಯದ ಹಾಟ್ ದೃಶ್ಯಗಳಿದ್ದವು. ಇದು ನಟ ಉಪೇಂದ್ರ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿತು. ಆಗ, ನಟಿ ಪ್ರಿಯಾಂಕ, ಇಂಥ ದೃಶ್ಯಗಳಲ್ಲಿ ಅಭಿನಯಿಸಬಾರದಿತ್ತು. ಒಪ್ಪಿಕೊಂಡು ತಪ್ಪು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದರು. ಇದು ಪ್ರಿಯಕರ ಕಮ್ ಪತಿಯಾಗಿದ್ದ ಉಪೇಂದ್ರರ ಸಲುವಾಗಿ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇದೀಗ ಚಕ್ರ ಸುತ್ತಿದೆ. ಅದೇ ಉಪೇಂದ್ರ ಅಭಿನಯದ ‘ ಐ ಲವ್ ಯೂ’ ಸಿನಿಮಾದಲ್ಲಿನ ಹಾಟ್ ಸೀನ್ ನಲ್ಲಿ ನಟಿಸುವ ಮೂಲಕ ಗುಳಿಕೆನ್ನೆ ಚೆಲುವೆ ನಟಿ ರಚಿತಾ ರಾಮ್ ಪಶ್ಚ್ಯತಾಪ ಪಟ್ಟಿದ್ದಾರೆ. ಈ ದೃಶ್ಯದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿ ಅಪ್ಪನ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಟಿವಿ ಸಂದರ್ಶನದಲ್ಲಿ ನಟಿ ಕಣ್ಣಿರು ಹಾಕಿದ್ದಾರೆ. ಈ ಘಟನೆ ನೋಡಿದಾಗ 15 ವರ್ಷದ ಹಿಂದೆ ಪ್ರಿಯಾಂಕ ಎದುರಿಸಿದ್ದ ಸನ್ನಿವೇಶ ಕಣ್ ಮುಂದೆ ಬಂದ್ರೆ ಆಶ್ಚರ್ಯವಿಲ್ಲ.

—–

KEY WORDS : priyanka-upendra-rachita.ram-kannada-actress-confess-hot-scene