ಪ್ರಧಾನಿ ಮೋದಿಗೆ ನಾಲಾಯಕ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕಿಡಿ: ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಬೇಕು ಎಂದ ಮಾಜಿ ಸಿಎಂ ಬಿಎಸ್ ವೈ.

Promotion

ಬೆಂಗಳೂರು,ಮೇ,3,2023(www.justkannada.in): ಪ್ರಧಾನಿ ಮೋದಿಗೆ ನಾಲಾಯಕ್ ಎಂದು ಹೇಳಿದ  ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ, ಪ್ರಧಾನಿ ಮೋದಿ ಬಗ್ಗೆ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡಿದ್ದಾರೆ. ಜನರು ಕಾಂಗ್ರಸ್ ಗೆ ಛೀಮಾರಿ ಹಾಕಬೇಕು.  ಮೋದಿ ಬಗ್ಗೆ ಮಾತನಾಲು ಕಾಂಗ್ರೆಸ್ ಗೆ ನೈತಿಕತೆ ಇದೆಯಾ. ಇಂತಹ  ಹೇಳಿಕೆ ಅವರಿಗೆ ಶೋಭೆ ತರಲ್ಲ. ಜನರು ಕಾಂಗ್ರೆಸ್ ತಕ್ಕ ಪಾಠ ಕಲಿಸಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

Key words: Priyank Kharge- statement -Nalayak -PM Modi-BS Yeddyurappa