ಮುಗಿದ ಡೆಡ್’ಲೈನ್: ಸರಕಾರಕ್ಕೆ ಸೆಡ್ಡು ಹೊಡೆದು ನಾಳೆಯಿಂದ ಖಾಸಗಿ ಶಾಲೆ ಆರಂಭ?!

Promotion

ಬೆಂಗಳೂರು, ಆಗಸ್ಟ್ 1, 2021 (www.justkannada.in): ನಾಳೆಯಿಂದಖಾಸಗಿಶಾಲೆಗಳನ್ನುಆರಂಭಿಸಲುರುಪ್ಸಾ (RUPSA) ಸಂಘಟನೆನಿರ್ಧರಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದವು. ಈ ಹಿಂದೆ ಜುಲೈ 31 ರ ವೊಳಗೆ ಸರ್ಕಾರ ನಿರ್ಧರಿಸಬೇಕು. ಇಲ್ಲದಿದ್ದರೆ ಆಗಸ್ಟ್ 2 ರಿಂದ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ತಿಳಿಸಿದ್ದವು. ಅದರಂತೆ ನಾಳೆಯಿಂದ ಶಾಲಾರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಸರ್ಕಾರದಿಂದ ಶಾಲೆ ಆರಂಭಕ್ಕೆ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ  ರುಪ್ಸಾ ನಾಳೆಯಿಂದ ಶಾಲೆ ಆರಂಭಕ್ಕೆ ರುಪ್ಸಾ ಸಂಘಟನೆ ಮುಂದಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.