ಟೆಂಪೋಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್: ನಾಲ್ವರು ಸಜೀವ ದಹನ.

Promotion

ಕಲ್ಬುರ್ಗಿ,ಜೂನ್,3,2022(www.justkannada.in): ಟೆಂಪೋಗೆ ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ಕಲ್ಬರ್ಗಿ ಜಿಲ್ಲೆ ಕಮಲಾಪುರ ಹೊರ ವಲಯದಲ್ಲಿ ನಡೆದಿದೆ.

ಗೋವಾದಿಂದ ಹೈದರಾಬಾದ್ ​ಗೆ ಖಾಸಗಿ ಬಸ್ ತೆರಳುತ್ತಿದ್ದಾಗ ಬೆಳಿಗ್ಗೆ 6 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದ್ದು, ನಾಲ್ವರು ಸಜೀವದಹನವಾಗಿದ್ದು, ಗಾಯಗೊಂಡಿದ್ದ ಹನ್ನೆರಡು ಜನರ ರಕ್ಷಣೆ ಮಾಡಲಾಗಿದೆ. ದುರಂತಕ್ಕೀಡಾದ ಬಸ್​ ನಲ್ಲಿ 35 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಚಾಲಕನ ಅಜಾಗರೂಕತೆ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಸ್ಥಳಕ್ಕೆ ಕಲಬುರುಗಿ ಎಸ್ಪಿ ಇಶಾಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಬಸ್ ಉರುಳಿ ಬಿದ್ದ ನಂತರ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

Key words: private bus-Tempo-collided-four – burnt –alive-kalburgi