ಹೂ ವ್ಯಾಪಾರಿಗಳ ಜೀವಕ್ಕೆ ಕುತ್ತು ತಂದ ಮ್ಯಾಕ್ಸಿಕ್ಯಾಬ್: ಅಪಘಾತದಲ್ಲಿ ನಾಲ್ವರು ಸಾವು

Promotion

ತುಮಕೂರು, ಅಕ್ಟೋಬರ್ 17, 2020 (www.justkannada.in): ಖಾಸಗಿ ಬಸ್ ಹಾಗೂ ಮ್ಯಾಕ್ಸಿ ಕ್ಯಾಬ್ ನಡುವೆ ಭೀಕರ ಅಪಘಾತ ವಾಗಿ ಸ್ಥಳದಲ್ಲೇ ನಾಲ್ವರ ಸಾವನ್ನಪ್ಪಿ ಒಬ್ಬರು ತೀವ್ರ ಸ್ವರೂಪದ ಗಾಯಗೂಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ತುಮಕೂರು- ಶಿವಮೊಗ್ಗ ಹೆದ್ದಾರಿ ತುಮಕೂರು ನಗರದ ಹೊರ ವಲಯದ ಹೆಗ್ಗೆರೆ ಸಮೀಪದ ಸಿದ್ದಾರ್ಥನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ಸಂಭವಿಸದೆ. ಸತ್ತವರನ್ನು ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನವರೆಂದು ಹೇಳಲಾಗಿದ್ದು, ಗುರುತು ಪತ್ತೆ ಕಾರ್ಯ ಸಾಗಿದೆ.

ಹೂವಿನ ವ್ಯಾಪಾರಿಗಳು ಎನ್ನಲಾದ ಇವರು, ತುಮಕೂರಿನ ಅಂತರಸನಹಳ್ಳಿಯ ಹೂವಿನ ಮಾರುಕಟ್ಟೆಯಿಂದ ಹೂ ಖರೀದಿಸಿ ತೆರಳುತ್ತಿದ್ದರು. ಶಿವಮೊಗ್ಗದಿಂದ ಬೆಂಗಳೂರಿಗೆ ಖಾಸಗಿ ಬಸ್ ಪ್ರಯಾಣಿಸುತ್ತಿತ್ತು. ಈ ವೇಳೆ ತುಮಕೂರಿನಿಂದ ಚಿಕ್ಕನಾಯಕನಹಳ್ಳಿ ಕಡೆ ತೆರಳುತ್ತಿದ್ದ ಮ್ಯಾಕ್ಸಿಕ್ಯಾಬ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರ ನಾಲ್ವರ ಪೈಕಿ ಓರ್ವ ಮಹಿಳೆ, ಮೂವರು ಪುರುಷರು ಎಂದು ಪೊಲೀಸರು ತಿಳಿಸಿದ್ದಾರೆ.