ಮುಂದಿನ ಐದು ತಿಂಗಳ ಕಾಲ ಸಿನಿಮಾ ಶೂಟಿಂಗ್ ಗೆ ಪ್ರಿನ್ಸ್ ಮಹೇಶ್ ಬಾಬು ಬ್ರೇಕ್

Promotion

ಹೈದರಾಬಾದ್,ಜ,27,(www.justkannada.in):  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮಂಡಿ ಸಮಸ್ಯೆಗೆ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದು, ಹೀಗಾಗಿ  ಮುಂದಿನ ಐದು ತಿಂಗಳ ಕಾಲ ಸಿನಿಮಾ ಶೂಟಿಂಗ್ ನಿಂದ ಬ್ರೇಕ್ ಪಡೆಯಲಿದ್ದಾರೆ.

2014 ರಲ್ಲಿ ಆಗಡು ಸಿನಿಮಾ ಶೂಟಿಂಗ್ ವೇಳೆ ಮಹೇಶ್ ಬಾಬು ಮಂಡಿಗೆ ಪೆಟ್ಟು ಮಾಡಿಕೊಂಡಿದ್ದರು. ಆದರೆ ತಮ್ಮ ಬಿಡುವಿಲ್ಲದ ಸಿನಿಮಾ ಕೆಲಸಗಳಿಂದಾಗಿ ಇಷ್ಟು ವರ್ಷ ಶಸ್ತ್ರಚಿಕಿತ್ಸೆ ಮುಂದೂಡಿದ್ದರು. ಆದರೆ ಈಗ ಕೆಲವು ದಿನಗಳ ಕಾಲ ಬ್ರೇಕ್ ಪಡೆದುಕೊಂಡು ಆರೋಗ್ಯದ ಕಡೆಗೆ ಗಮನಹರಿಸಲಿದ್ದಾರೆ.

ಮಂಡಿ ಸಮಸ್ಯೆಗೆ ಮಹೇಶ್ ಬಾಬು ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ.  ಹೀಗಾಗಿ ಮುಂದಿನ ಐದು ತಿಂಗಳು ಬ್ರೇಕ್ ಪಡೆಯಲಿದ್ದಾರೆ.