“ಕೈಲಾಗದವರು ಮೈ ಪರಚಿಕೊಂಡರು” : ಪ್ರಧಾನಿ ಮೋದಿ ಟೀಕಿಸಿದ ದಿನೇಶ್ ಗುಂಡೂರಾವ್

ಬೆಂಗಳೂರು,ಫೆ.18,2021(www.justkannada.in) : ಪ್ರಧಾನಿಯವರು ತಮ್ಮ ವೈಫಲ್ಯಕ್ಕೆ ಹಿಂದಿನ ಸರ್ಕಾರಗಳನ್ನು ಹೊಣೆ ಮಾಡುವ ಕೆಟ್ಟ ಚಾಳಿ ಬಿಟ್ಟಿಲ್ಲ. ಇದು ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.jk

ಪೆಟ್ರೋಲ್ ದರ ಏರಿಕೆಗೆ ಹಿಂದಿನ ಸರ್ಕಾರಗಳು ಕಾರಣ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

6 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿಯವರು ಸರ್ಕಾರಿ ಸಂಸ್ಥೆಗಳನ್ನು ಮಾರಿದ್ದು ಬಿಟ್ಟು, ತೈಲ ಆಮದು ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

2014 ರಲ್ಲಿ ಪೆಟ್ರೋಲ್ ಮೂಲ ಬೆಲೆ 47.12 ರಷ್ಟಿತ್ತು. ಇಂದು ಮೂಲಬೆಲೆ  29.34 ಕ್ಕೆ ಇಳಿದಿದೆ. ಆದರೆ, ಹಾಲಿ ಸರ್ಕಾರ 200% ರಷ್ಟು ತೆರಿಗೆ ಹೆಚ್ಚಿಸಿ ‘ತೆರಿಗೆ ಲೂಟಿ’ ಮಾಡುತ್ತಿರುವುದೇಕೆ? ಆಮದಿನ ಬಗ್ಗೆ ಮಾತನಾಡುವ ಪ್ರಧಾನಿಯವರು ತೆರಿಗೆ ಹೆಚ್ಚಳದ ಬಗ್ಗೆಯೂ ಮಾತಾಡಲಿ ಎಂದು ಆಗ್ರಹಿಸಿದ್ದಾರೆ.ಪ್ರಧಾನಿಯವರು ನೈಸರ್ಗಿಕ ಅನಿಲ ಬಳಕೆಗೆ ಒತ್ತು ಕೊಡಲು ಹೇಳಿದ್ದಾರೆ. ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ONGC  ಗೂ ಕುತ್ತು ಬಂತು ಎಂದರ್ಥ. ಲಾಭದಲ್ಲಿ ನಡೆಯುತ್ತಿರುವ  ONGC ಯನ್ನು ಖಾಸಗೀಕರಣಗೊಳಿಸಲು ಈಗಿಂದಲೇ ಪೀಠಿಕೆ ಹಾಕುವಂತಿದೆ ಅವರ ಮಾತಿನ ಅರ್ಥ ಎಂದು ಆರೋಪಿಸಿದ್ದಾರೆ.

ಉತ್ಪಾದನೆ ಹೆಚ್ಚಿಸುವ ನೆಪದಲ್ಲಿ  ONGC ಯನ್ನು ಖಾಸಗಿಯವರಿಗೆ ಮಾರಾಟವಾದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
ತಮ್ಮ ಹುಳುಕು ಮುಚ್ಚಿಡಲು, ತಪ್ಪನ್ನು ಬೇರೆಯವರ ತಲೆಗೆ ಕಟ್ಟುವ ಕೆಟ್ಟ ಅಭ್ಯಾಸವನ್ನು ಪ್ರಧಾನಿಯವರು ಬಿಡಲಿ ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯವರು ಬೆಲೆ ಏರಿಕೆಗೆ ಜನರೇ ಕಾರಣ ಎನ್ನಲು ಹಿಂಜರಿಯುವುದಿಲ್ಲ

Prime Minister,Modi,Criticized,Dinesh Gundurao

ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣ ಎಂಬಂತೆ ಪೀಪಿ ಊದುವ ಪ್ರಧಾನಿಯವರು ಈ ಮೂಲಕ ತಮ್ಮದು ಕೇವಲ ಬಡಾಯಿ ಸರ್ಕಾರ ಎಂದು ತೋರಿಸಿದ್ದಾರೆ. ಮುಂದೊಂದು ದಿನ ಪ್ರಧಾನಿಯವರು ಬೆಲೆ ಏರಿಕೆಗೆ ಜನರೇ ಕಾರಣ ಎನ್ನಲು ಹಿಂಜರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ENGLISH SUMMARY….

Dinesh Gundurao criticizes PM Narendra Modi on hike in fuel prices
Bengaluru, Feb. 18, 2021 (www.justkannada.in): “The Prime Minister is not stopping his habit of making the earlier government’s responsibility for his failures. This shows his helplessness,” opined Congress leader Dinesh Gundurao.Dinesh Gundurao criticizes PM Narendra Modi on hike in fuel prices Bengaluru, Feb. 18, 2021 (www.justkannada.in): "The Prime Minister is not stopping his habit of making the earlier government's responsibility for his failures. This shows his helplessness," opined Congress leader Dinesh Gundurao. In response to Prime Minister Narendra Modi's allegations that the earlier governments' are responsible for the present fuel price hike, Dinesh Gundurao has expressed his ire in his tweet. "Prime Minister Narendra Modi is running the government for the last six years. Has he ever taken any measures to reduce the prices of fuel other than selling government institutions?," he has questioned. "The basic price of petrol was Rs.47.12 in 2014. Now it has been reduced to Rs.29.34. Why is the government looting people by increasing the taxes by 200%?! While the Prime Minister speaks about import let him also speak about an increase in taxes," the tweet read. "Modi has asked to give preference to natural gas. It means he will soon privatize ONGC too," he added. Keywords: Dinesh Gundurao/ increase in fuel prices/ Prime Minister Narendra Modi/ ONGC/ natural gas
In response to Prime Minister Narendra Modi’s allegations that the earlier governments’ are responsible for the present fuel price hike, Dinesh Gundurao has expressed his ire in his tweet. “Prime Minister Narendra Modi is running the government for the last six years. Has he ever taken any measures to reduce the prices of fuel other than selling government institutions?,” he has questioned.
“The basic price of petrol was Rs.47.12 in 2014. Now it has been reduced to Rs.29.34. Why is the government looting people by increasing the taxes by 200%?! While the Prime Minister speaks about import let him also speak about an increase in taxes,” the tweet read.
“Modi has asked to give preference to natural gas. It means he will soon privatize ONGC too,” he added.
Keywords: Dinesh Gundurao/ increase in fuel prices/ Prime Minister Narendra Modi/ ONGC/ natural gas

key words : Prime Minister-Modi-Criticized-Dinesh Gundurao