ಟ್ವಿಟ್ಟರ್’ನಲ್ಲಿ ಜನತೆಗೆ ಗಣೇಶ ಚತುರ್ಥಿ ಶುಭ ಕೋರಿದ ಪ್ರಧಾನಿ ಮೋದಿ

Promotion

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಗಣೇಶೋತ್ಸವದ ಶುಭಾಶಯ ಕೋರಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನಕ್ಕೆ ಸಂತೋಷ, ಶಾಂತಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಗಣಪತಿ ಬಪ್ಪಾ ಮೋರಿಯಾ! ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ಇನ್ನು ದೇಶಾದ್ಯಂತ ಇಂದು ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ವಿಘ್ನ ನಿವಾರಕನ ಪೂಜೆ ನಡೆಯುತ್ತಿದೆ.

ನಿಮ್ಮೆಲ್ಲರಿಗೂ ಗಣೇಶ ಚತುರ್ಥಿ ಶುಭಾಶಯಗಳು, ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನಕ್ಕೆ ಸಂತೋಷ, ಶಾಂತಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಮೋದಿ ಶುಭ ಕೋರಿದ್ದಾರೆ.

key words: Prime Minister Narendra Modi on Twitter