ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ: ಅವರಿಗೆ ಬೈದರೆ ಆಕಾಶಕ್ಕೆ ಉಗುಳಿದ ಹಾಗೆ- ಸಿಎಂ ಬೊಮ್ಮಾಯಿ.

Promotion

ಬೆಂಗಳೂರು,ಜನವರಿ,23,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಿಟ್ಲರ್ ಗೆ ಹೋಲಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ  ಸಿಎಂ ಬಸವರಾಜ ಬೊಮ್ಮಾಯಿ  ವಾಗ್ದಾಳಿ ನಡೆಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ,  ಸಿದ್ಧರಾಮಯ್ಯ ಟೀಕೆಗಳನ್ನ ನಾನು ಸ್ವಾಗತ ಮಾಡುತ್ತೇನೆ.  ಟೀಕೆಗಳನ್ನ ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಪಡೆಯುತ್ತೇನೆ. ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ. ಮೋದಿ ಅವರಿಗೆ ಬೈದರೆ ಅಕಾಶಕ್ಕೆ ಉಗುಳಿದ ಹಾಗೆ ಆಗುತ್ತೆ.

ಈ ಹಿಂದೆ  ಮೋದಿಯವರನ್ನ ಸೋನಿಯಾ ಗಾಂಧಿ ಟೀಕೆ ಮಾಡಿದ್ರು. ಆಗ ಮೋದಿಗೆ ವೋಟ್ ಜಾಸ್ತಿಯಾಯಿತು.  ಜನಮನ್ನಣೆ ಸಿಕ್ಕಿತು.  ಕಾಂಗ್ರೆಸ್ ಏನೇ ಹೇಳಿದರೂ ಜನರು ನಮ್ಮ ಪರ ಇರುತ್ತಾರೆ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

Key words:  Prime Minister-Modi – leader – popular- CM Bommai –siddaramaiah