ಪ್ರಧಾನಿ ಮೋದಿಯದ್ದು ಹಿಟ್ಲರ್ ಆಡಳಿತ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

Promotion

ಮಂಗಳೂರು,ಅ,5,2019(www.justkannada.in):   ಪ್ರಧಾನಿ ಮೋದಿಯದ್ದು ಹಿಟ್ಲರ್ ಆಡಳಿತ.  ಮೋದಿ ವಿರುದ್ದ ಯಾರೂ ಮಾತನಾಡಬಾರದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ.ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾವು ರಾಜ್ಯಕ್ಕೆ ಕನಿಷ್ಟ 5 ಸಾವಿರ ಪರಿಹಾರ ಕೇಳಿದ್ದವು. ಆದರೆ ಎರಡು ತಿಂಗಳ ಬಳಿಕ 1200 ಕೋಟಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಬೊಕ್ಕಸದಿಂದ ಪರಿಹಾರ ನೀಡಬಹುದಿತ್ತು ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುತ್ತಾರೆ. ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇದೆಯಾ ಅಥವಾ ಇಲ್ಲವಾ ಗೊತ್ತಿಲ್ಲ. ಖಜಾನೆಯಲ್ಲಿ ಹಣ ಖಾಲಿಯಾಗಲು ಚಾನ್ಸೇ ಇಲ್ಲ. ಏಕೆಂದರೆ ಪ್ರತಿ ತಿಂಗಳು ತೆರಿಗೆ ಸಂಗ್ರಹವಾಗುತ್ತದೆ ಎಂದು  ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದರು.

Key words: Prime Minister -Modi – Hitler-  Former CM Siddaramaiah -outrage