ಪ್ರಧಾನಿ ಮೋದಿ-ಅಮಿತ್ ಶಾ ಬೆಂಕಿ-ಬಿರುಗಾಳಿಯಂತೆ: ಅವರನ್ನ ತಡೆಯಲು ಡಿಕೆಶಿಗೆ ಸಾಧ್ಯವೆ..? ಸಚಿವ ಆರ್.ಅಶೋಕ್.

kpcc-president-dk-shivakumar-function-minister-r-ashok
Promotion

ಬೆಂಗಳೂರು,ಡಿಸೆಂಬರ್,31,2022(www.justkannada.in): ಪ್ರಧಾನಿ ಮೋದಿ-ಅಮಿತ್ ಶಾ ಬೆಂಕಿ-ಬಿರುಗಾಳಿಯಂತೆ. ಅವರನ್ನ ತಡೆಯಲು ಡಿಕೆ ಶಿವಕುಮಾರ್ ಗೆ ಸಾಧ್ಯವೆ..? ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ , ಮೋದಿ ಅಮಿತ್ ಶಾ ಬೆಂಕಿ-ಬಿರುಗಾಳಿಯಂತೆ. ಮೋದಿ – ಅಮಿತ್ ಶಾ ಅವರು ಇನ್ಮುಂದೆ ಬರುತ್ತಿರುತ್ತಾರೆ. ರಾಹುಲ್ ಗಾಂಧಿ  ಕಾಲಿಟ್ಟ ಕಡೆಯಲೆಲ್ಲಾ ಕಾಂಗ್ರೆಸ್ ಗೆ ಸೋಲಾಗುತ್ತೆ ಎಂದು ಟೀಕಿಸಿದರು.kpcc-president-dk-shivakumar-function-minister-r-ashok

ಜೆಡಿಎಸ್ ನವರು ಆ ರತ್ನ ಈ ರತ್ನ ಅಂತಾ ಇದ್ದಾರೆ.  ಈಗಿನ ಸಮೀಕ್ಷೆ ಪ್ರಕಾರ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ವರದಿ ಬಂದಿದೆ.  ಬೆಂಗಳೂರಿನಲ್ಲಿ ಬಿಜೆಪಿ 20 ಸ್ಥಾನ ಗೆಲ್ಲುತ್ತೆ ಎಂಬ ವರದಿ ಬಂದಿದೆ.  ಅಮಿತ್ ಶಾ ಮೋದಿ ಬಂದ ಮೇಳೆ ಶೇ. 20ರಷ್ಟು ಮತ ಜಾಸ್ತಿಯಾಗಿದೆ. ಅದಕ್ಕೆ ಅಮಿತ್ ಶಾಗೆ ಚುನಾವಣಾ ಚಾಣಕ್ಯ ಅನ್ನೋದು ಎಂದರು.

Key words: Prime Minister- Modi-Amit Shah – fire-storm-Minister -R. Ashok.