ಅಗ್ನಿಪಥ್ ಯೋಜನೆ ಬಗ್ಗೆ ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರ ಮೌನವೇಕೆ..? ಮಲ್ಲಿಕಾರ್ಜುನ ಖರ್ಗೆ ಕಿಡಿ

ನವದೆಹಲಿ,ಜೂನ್,20,2022(www.justkannada.in): ಅಗ್ನಿಪಥ್ ಯೋಜನೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ಮಧ್ಯೆ ಯೋಜನೆ ಬಗ್ಗೆ ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಏಕೆ ಮೌನವಹಿಸಿದ್ದಾರೆ ಎಂದು   ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ ಪ್ರಶ್ನಿಸಿದ್ದಾರೆ.

ಅಗ್ನಿಪಥ್ ಯೋಜನೆಯ ಪ್ರಯೋಜನ ಮತ್ತು ಅಗ್ನಿವೀರರಿಗೆ ನೀಡುವ ತರಬೇತಿ, ಅನುಕೂಲಗಳ ಬಗ್ಗೆ ವಾಯುಸೇನೆ, ಸೇನಾಪಡೆ ಮತ್ತು ನೌಕಾಪಡೆ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಈ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ,   75 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸರ್ಕಾರದ ನೀತಿ ನಿರ್ಧಾರವನ್ನು ಸಮರ್ಥಿಸಲು ಸೇವಾ ಮುಖ್ಯಸ್ಥರು ಮುಂದಾಗಿದ್ದಾರೆ.  ಅಗ್ನಿಪಥ ಯೋಜನೆ ಬಗ್ಗೆ ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಏಕೆ ಮೌನವಾಗಿದ್ದಾರೆ? ಎಂದು  ಕಿಡಿಕಾರಿದ್ದಾರೆ.70-year-old-coronavirus-vaccine-young-people-mallikarjuna-kharge

‘ಅಗ್ನಿಪಥ್ ಯೋಜನೆಯ ಮೂಲಕ ಸಶಸ್ತ್ರ ಪಡೆಗಳನ್ನು ಸೇರಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಪ್ರತಿಭಟನೆಯ ಭಾಗವಾಗಿಲ್ಲ ಅಥವಾ ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಜ್ಞೆ ಸಲ್ಲಿಸಬೇಕು. ಪೊಲೀಸ್ ಪರಿಶೀಲನೆ ಇಲ್ಲದೆ ಯಾರೂ ಪಡೆಗಳನ್ನು ಸೇರಲು ಸಾಧ್ಯವಿಲ್ಲ. ನಾವು ನಿಬಂಧನೆಗಳನ್ನು ಮಾಡಿದ್ದೇವೆ ಎಂದು ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ನಿನ್ನೆ ಹೇಳಿಕೆ ನೀಡಿದ್ದರು.

Key words:  Prime Minister- Home Minister – Defense Minister- Silence -Agnipath –Mallikarjuna Kharge