ರಾಷ್ಟ್ರಪತಿ ಚುನಾವಣಾ ಫಲಿತಾಂಶ: 2ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು.

Promotion

ನವದೆಹಲಿ,ಜುಲೈ,21,2022(www.justkannada.in):  ಮುಂದಿನ ರಾಷ್ಟ್ರಪತಿ ಆಯ್ಕೆಗೆ ಜುಲೈ 18 ರಂದು ಚುನಾವಣಾ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದ್ದು ಫಲಿತಾಂಶ ಪ್ರಕಟವಾಗುತ್ತಿದೆ. ಈ ಮಧ್ಯೆ 2ನೇ ಸುತ್ತಿನಲ್ಲೂ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮುನ್ನಡೆ ಸಾಧಿಸಿದ್ದಾರೆ.

ಸಂಸದರ ಮತಗಳನ್ನು ಮೊದಲು ಎಣಿಕೆ ಮಾಡಲಾಗಿತ್ತು. ಇದರಲ್ಲಿ  ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು 748 ಮತಗಳಲ್ಲಿ ದ್ರೌಪದಿ ಮುರ್ಮು 540 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 204 ಮತಗಳನ್ನು ಪಡೆದಿದ್ದರು.

ಇದೀಗ  1349 ಮತಗಳನ್ನ ಪಡೆದು ಎರಡನೇ ಸುತ್ತಿನಲ್ಲೂ ದ್ರೌಪದಿ ಮುರ್ಮು ಅವರು ಮುನ್ನಡೆ ಸಾಧಿಸಿದ್ದಾರೆ. ದ್ರೌಪದಿ ಮುರ್ಮು ಅವರು ಪಡೆದಿರುವ ಮತಗಳ ಮೌಲ್ಯ 4,89,299 ಗಳಾಗಿದೆ. ಇನ್ನು ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ  ಅವರು 537 ಮತಗಳನ್ನ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಇವರ ಮತಗಳ ಮೌಲ್ಯ 1,89,876

Key words: Presidential –election- result-NDA candidate -Draupadi Murmu – lead