ಟೀಂ ಇಂಡಿಯಾ ಯುವ ಆಟಗಾರರಿಗೆ ಭರ್ಜರಿ ಗಿಫ್ಟ್ ನೀಡಿದ ಮಹಿಂದ್ರಾ ಗ್ರೂಪ್ ಅಧ್ಯಕ್ಷ !

Promotion

ಬೆಂಗಳೂರು, ಜನವರಿ 24, ಜನವರಿ 2021 (www.justkannada.in): ಮೊಹಮ್ಮದ್ ಸಿರಾಜ್ , ಶುಭ್ ​ ಮನ್ ಗಿಲ್ , ವಾಷಿಂಗ್ಟನ್ ಸುಂದರ್ , ಟಿ.ನಟರಾಜನ್ , ನವದೀಪ್ ಸೈನಿ ಮತ್ತು ಶಾರ್ದುಲ್ ಮಹಿಂದ್ರಾ ಗ್ರೂಪ್ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂಲಕ ಪಾದಾರ್ಪಣೆ ಮಾಡಿದ ಐವರು ಟೀಂ ಇಂಡಿಯಾ ಯುವ ಆಟಗಾರರಿಗೆ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ​ ಮಹೀಂದ್ರಾ ಅವರು ಥಾರ್ ಎಸ್ ‌ಯುವಿ ಉಡುಗೊರೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ​ ಮಹೀಂದ್ರಾ, ಯುವಕರು ತಮ್ಮ ಮೇಲೆ ತಾವು ನಂಬಿಕೆ ಇಡಬೇಕು . ಮತ್ತು ಈ ಹಿಂದೆ ಯಾರೂ ತುಳಿದಿರದ ಹಾದಿಯಲ್ಲಿ ಸಾಗಿ ಕಾರ್ಯಗಳನ್ನ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಉಡುಗೊರೆ ನೀಡಲಾಗ್ತಿದೆ ಎಂದಿದ್ದಾರೆ.

ಸರಣಿ ಪಂದ್ಯ ಮತ್ತು ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನು ಗೆಲ್ಲಲು ನೆರವಾದ ಈ 6 ಆಟಗಾರರಿಗೆ , ಹೊಸ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ .