ಕೋವಿಡ್ ನಿಯಂತ್ರಣಕ್ಕೆ ಸಿದ್ಧತೆ: ಎಂತಹ ಕಠಿಣ ಸಂದರ್ಭ ಬಂದರೂ ಎದುರಿಸಲು ಸಿದ್ಧ- ಸಚಿವ ಸುಧಾಕರ್.

Promotion

ಬೆಳಗಾವಿ,ಡಿಸೆಂಬರ್,27,2022(www.justkannada.in): ರಾಜ್ಯದಲ್ಲಿ ಕೋವಿಡ್  ನಿಯಂತ್ರಣಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಎಂತಹ ಕಠಿಣ ಸಂದರ್ಭ ಬಂದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್,  ಕೋವಿಡ್ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.  ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ  ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುತ್ತದೆ.  ಒಮಿಕ್ರಾನ್ ರೂಪಾಂತರಿ ಗಂಭೀರ ಪರಿಣಾಮ ಬೀರುವ ಬಗ್ಗೆ ಮಾಹಿತಿ ಇಲ್ಲ ಹಿರಿಯರು ಇತರೇ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರ ವಹಿಸಬೇಕು ಎಂದರು.

ಇನ್ನು ರಾಜ್ಯಾದ್ಯಂತ ಮಾಕ್ ಡ್ರಿಲ್ ಮಾಡಲಾಗುವುದು. ಹುಬ್ಬಳ್ಳಿ ಬೆಳಗಾವಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ.  ಕಠಿಣ ಸಂದರ್ಭ  ಬಂದರೂ ಎದುರಿಸಲು ಸಿದ್ಧರಿದ್ದೇವೆ. ಜನಜಂಗುಳಿ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Preparedness -Covid –Control-Minister -Sudhakar.