ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತಕ್ಕೆ ಸುದ್ಧಿಗೋಷ್ಠಿ ಆರಂಭ: ರಾಜ್ಯದಲ್ಲಿದ್ದಾರೆ 5.21 ಕೋಟಿ ಮತದಾರರು.

ನವದೆಹಲಿ,ಮಾರ್ಚ್,29,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲು ಕೇಂದ್ರ ಚುನಾವಣಾ ಆಯೋಗದ ಸುದ್ಧಿಗೋಷ್ಠಿ ಆರಂಭವಾಗಿದೆ.

ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನವಣಾ ಆಯುಕ್ತ ರಾಜೀವ್ ಕುಮಾರ್ ಸುದ‍್ಧಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದಾರೆ.   ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧವಿದೆ.  ವಿದ್ಯುನ್ಮಾನ ಮತಯಂತ್ರಗಳು ಸೇರಿ ಎಲ್ಲವೂ ಸಿದ‍್ಧವಿದೆ. ಮೇ25ಕ್ಕೆ 15ನೇ ವಿಧಾನಸಭೆ ಅವಧಿ ಮುಗಿಯಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ರಾಜ್ಯದಲ್ಲಿ 5.21 ಕೋಟಿ ಮತದಾರರಿದ್ದಾರೆ. ಪುರುಷ ಮತದಾರರು-2,62,42,661 ಮಹಿಳಾ ಮತದಾರರು-2.59,26,319 ಹಾಗೂ  4699 ತೃತಿಯ ಲಿಂಗಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Key words: Preparations – state assembly- elections-central election-commission.