ಏನಾದರೂ ತನಿಖೆ ಮಾಡಿ,ಯಾರನ್ನಾದರೂ ಬ್ಯಾನ್ ಮಾಡಿ, ಆದ್ರೆ ಪ್ರವೀಣ್ ಕುಟುಂಬಕ್ಕೆ ನ್ಯಾಯಕೊಡಿ- ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಜುಲೈ,28,2022(www.justkannada.in): ಏನಾದರೂ ತನಿಖೆ ಮಾಡಿ,ಯಾರನ್ನಾದರೂ ಬ್ಯಾನ್ ಮಾಡಿ, ಆದ್ರೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನ್ಯಾಯಕೊಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ಅನ್ಯಾಯ. ನಾನು ಪೊಲೀಸರಿಗೂ ಹೇಳುತ್ತೇನೆ ಮುಕ್ತವಾಗಿ ತನಿಖೆ ಮಾಡಿ.ಪ್ರಕರಣದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ. ಇದರಲ್ಲಿ ಮಧ್ಯಪ್ರವೇಶ ಮಾಡಲು ನಾವು ತಯಾರಿಲ್ಲ.  ಇದರಲ್ಲಿ ರಾಜಕಾರಣ ಮಾಡುವುದು ಉಪಯೋಗವಿಲ್ಲ. ನಿಮ್ಮ ತಪ್ಪು ಒಪ್ಪಿಕೊಳ್ಳಿ ಸಾಕು.  ಸರ್ಕಾರ ಪ್ರಾರಂಭದಿಂದ ನಿಯಂತ್ರಣ ಮಾಡಿದ್ದರೇ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಏನಾದರೂ ತನಿಖೆ ಮಾಡಿ, ಯಾರನ್ನಾದರೂ ಬ್ಯಾನ್ ಮಾಡಿ, ಅವರ ಕುಟುಂಬಕ್ಕೆ ನ್ಯಾಯಕೊಡಿ, ರಾಜ್ಯಕ್ಕೆ ಶಾಂತಿ ಬೇಕು ಎಂದು ಹೇಳಿದರು.

ನಾನು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೊರಟಿದ್ದೆ. ಅದರೆ ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಬೇಡ ಅಂದ್ರು ಹಾಗಾಗಿ ಸ್ವಲ್ಪದಿನ ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Praveen nettaru-murder-case-kpcc-president-DK Shivakumar