ಮೈಸೂರಿನ ಆಕಾಶವಾಣಿಗೆ ಭೇಟಿ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್..

ಮೈಸೂರು,ಆ,16,2019(www.justkananda.in):  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಇಂದು ಮೈಸೂರಿನ ಆಕಾಶವಾಣಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಕಾಶವಾಣಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಮೋದಾದೇವಿ ಒಡೆಯರ್ ಅವರು, ಅಕಾಶವಾಣಿಗೆ ಎಷ್ಟು ಬಾರಿ ಭೇಟಿ ಮಾಡಿದರೂ  ಬೇಜಾರಾಗಲ್ಲ. ಇಲ್ಲಿನ ವಾಸ್ತುಶಿಲ್ಪ ಹೆಸರಿಗೆ ತಕ್ಕಂತೆ ಇದೆ. ಇಲ್ಲಿ ಪ್ರತಿಬಾರಿಯೂ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ನಮ್ಮ ಮಾವನವರ ಕೃತಿಗಳನ್ನು ಸಂರಕ್ಷಿಸಿದ್ದಾರೆ. ಹೀಗಾಗಿ ಖುಷಿ ತಂದಿದೆ‌‌ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರು ದಸರಾ ಆಚರಣೆ ಕುರಿತು ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಹೇಳಿದ್ದಿಷ್ಟು…

ನಮ್ಮ ಅರಮನೆಯಲ್ಲಿ ದಸರಾ ಆಚರಣೆ ಗಣಪತಿ ಹಬ್ಬದ ನಂತರವೇ ಪ್ರಾರಂಭವಾಗುತ್ತೆ. ಸದ್ಯ ಅದರ ಸಿದ್ದತೆ ನಡೆಯುತ್ತಿದೆ. ಸರ್ಕಾರದಿಂದ ಯಾವ ಕಾರಣಕ್ಕೆ ತಡವಾಗುತ್ತಿದೆ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಇದರ ಬಗ್ಗೆ ನಾನು ಹೆಚ್ಚೇನು ಹೇಳುವುದಿಲ್ಲ. ಸರ್ಕಾರವು ಈಗಾ ದಸರಾ ಆಚರಣೆಗೆ ಮುಂದಾಗುತ್ತಿದೆ ಎಂದರು.

ರಾಜ್ಯದಲ್ಲಿ ಉಂಟಾದ ಮಹಾಮಳೆಯ ದುರಂತಕ್ಕೆ ಬೇಸರ ವ್ಯಕ್ತಪಡಿಸಿದ ಪ್ರಮೋದ ದೇವಿ ಒಡೆಯರ್, ನಾವೆಲ್ಲರೂ ಹೆಚ್ಚಿನ ಮಳೆ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಆದ್ರೇ ಈ ಬಾರಿ  ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಈ ಮಳೆಗೆ ಎಲ್ಲೋ ಒಂದು ಕಡೆ ಮನುಷ್ಯನೇ ಮಾಡಿದ ತಪ್ಪುಗಳಿಂದ ಆಗಿದೆ. ಮನುಷ್ಯ ಪರಿಸರದ ಮೇಲೆ ಮಾಡಿದ ದಾಳಿಗೆ ಉತ್ತರ ಈ ರೀತಿಯಾಗಿದೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದು ಬೇಸರ ಮೂಡಿಸುತ್ತಿದೆ ಎಂದರು.

Key words: Pramodadevi Wodeyar – visited – Mysore-akashavani