ತಾಂಬೂಲ ಪ್ರಶ್ನೆ ಬಗ್ಗೆ ಟೀಕಿಸಿದ ಅಬ್ದುಲ್ ಮಜೀದ್ ಗೆ ಪ್ರಮೋದ್ ಮುತಾಲಿಕ್ ಸವಾಲು.

Promotion

ಮೈಸೂರು,ಮೇ,28,2022(www.justkannada.in): ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ. ಮಸೀದಿಯ ಒಂದು ಹಿಡಿ ಮಣ್ಣನ್ನೂ  ಕೊಡಲ್ಲ ಎಂದು ಹೇಳಿಕೆ ನೀಡಿ ತಾಂಬೂಲ ಪ್ರಶ್ನೆ ಬಗ್ಗೆ ಟೀಕಿಸಿದ್ಧ ಎಸ್.ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮುತಾಲಿಕ್,  30 ಸಾವಿರ ದೇಗುಲಗಳನ್ನ ವಾಪಸ್ ತೆಗೆದುಕೊಳ್ಳುತ್ತೇವೆ. ತಾಕತ್ತಿದ್ದರೇ ತಡೆಯಿರಿ. ನಿಮ್ಮ ರೀತಿ ದಾಳಿ ಮಾಡಿ ತೆಗೆದುಕೊಳ್ಳುವುದಿಲ್ಲ ಎಂದು ಸವಾಲೆಸೆದರು.

ಮಜೀದ್  ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ದೇಶ ಯಾರ ಅಪ್ಪನದ್ದು  ಅಂತಾ ಹೇಳುವ ಅವಶ್ಯಕತೆ ಇಲ್ಲ. ನೀವು ಯಾರು ಅಫ್ಘನ್ ನಿಂದ ಬಂಧವರಲ್ಲ. ನಿಮ್ಮಲ್ಲೂ ಹಿಂದೂ ರಕ್ತವಿದೆ. ನೀವು ಭಾರತೀಯರು.  ಹಿಂದೂಗಳಿಗೆ ಗೌರವಕೊಡಿ ಎಂದು ತಿರುಗೇಟು ನೀಡಿದರು.

Key words: Pramod Muthalik-challenges -Abdul Majeed – criticize