ಕ್ಯಾನ್ಸರ್ ರೋಗಿಗಳಿಗೆ ತಲೆಕೂದಲು ದಾನ ಮಾಡಿದ ಪ್ರಜ್ವಲ್ ದೇವರಾಜ್

Promotion

ಬೆಂಗಳೂರು, ಡಿಸೆಂಬರ್ 01, 2021 (www.justkannada.in): ನಟ ಪ್ರಜ್ವಲ್ ದೇವರಾಜ್ ತಮ್ಮ ತಲೆ ಕೂದಲನ್ನು ಅವರು ಕ್ಯಾನ್ಸರ್​ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ‘ಪೊಗರು’ ಶೂಟಿಂಗ್​ ಮುಗಿದ ಬಳಿಕ ನಟ ಧ್ರುವ ಸರ್ಜಾ ಕೂಡ ಕೂದಲು ದಾನ ಮಾಡಿದ್ದರು.

ಇನ್ನು ಪ್ರಜ್ವಲ್​ ದೇವರಾಜ್​ ಅವರ 35ನೇ ಚಿತ್ರ ‘ಮಾಫಿಯಾ’ ಮುಹೂರ್ತ ಡಿ.2ರಂದು ನಡೆಯಲಿದೆ. ಚಿತ್ರಕ್ಕಾಗಿ ಶೂಟಿಂಗ್​ ಆರಂಭಿಸಲು ನಿರ್ದೇಶಕ ಲೋಹಿತ್​ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಡಿ.6ರಿಂದ ಚಿತ್ರೀಕರಣ ಶುರು ಆಗಲಿದೆ. ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಅವರು ನಟಿಸಲಿದ್ದಾರೆ.