ಬಿಡುಗಡೆಗೂ ಮುನ್ನವೇ ‘ಬಾಹುಬಲಿ’ ದಾಖಲೆ ಮುರಿದ ಸಾಹೋ !

Promotion

ಬೆಂಗಳೂರು, ಆಗಸ್ಟ್ 24, 2019 (www.justkannada.in): ಪ್ರಭಾಸ್ ನಟನೆಯ ಬಹುನಿರೀಕ್ಷಿತ `ಸಾಹೋ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಬರೆದಿದೆ.

ಭಾರತದಲ್ಲಿ ಸುಮಾರು 4500 ಥಿಯೇಟರ್ ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದ್ದು, ಬಾಹುಬಲಿ 2 ದಾಖಲೆಗಳನ್ನು ರಿಲೀಸ್ ಗೂ ಮುನ್ನವೇ ಧೂಳಿಪಟ ಮಾಡುತ್ತಿದೆ.

ತಮಿಳುನಾಡು ಒಂದರಲ್ಲೇ 550 ಸಿನಿಮಾ ಥಿಯೇಟರ್ ಗಳಲ್ಲಿ ಸಾಹೋ ಪ್ರದರ್ಶನು ಕಾಣಲಿದೆ. ತಮಿಳುನಾಡಿನಲ್ಲಿ ಹೆಚ್ಚು ಸ್ಕ್ರೀನಿಂಗ್ ಕಾಣುತ್ತಿರುವುದರಿಂದ ಅಲ್ಲಿನ ವ್ಯವಹಾರವೂ ಬಾಹುಬಲಿ 2 ಮೀರಿಸುವ ಲೆಕ್ಕಾಚಾರವಿದೆ.